ಬೆಂಗಳೂರು –
ಈ ಹಿಂದೆ ಧಾರವಾಡ ಜಿಲ್ಲಾಧಿಕಾರಿಯಾಗಿದ್ದ ಸಧ್ಯ ಬೆಂಗಳೂರಿನಲ್ಲಿರುವ ಐಎಎಸ್ ಅಧಿಕಾರಿ ದೀಪಾ ಚೋಳನ್ ಅವರ ತಂದೆ ಮತ್ತು ತಾಯಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.ಹೌದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಅವರ ಪತ್ನಿ ದೀಪಾ ಚೋಳನ್

ಸದ್ಯ ಚೋಳನ್ ದಂಪತಿ ಕೊವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದಾರೆ.ಕೇವಲ 10 ದಿನದ ಅಂತರದಲ್ಲಿ ದೀಪಾ ಚೋಳನ್ ತಂದೆ ಹಾಗೂ ತಾಯಿ ಸಾವನ್ನಪ್ಪಿದ್ದಾರೆ.ಬೆಂಗಳೂರಿನಲ್ಲಿ ಕೊವಿಡ್ ನಿರ್ವಹಣೆ ಹೊಣೆ ಹೊತ್ತಿದ್ದ ರಾಜೇಂದ್ರ ಚೋಳನ್ ಅತ್ತೆ, ಮಾವನ ಅಂತ್ಯಸಂಸ್ಕಾರಕ್ಕೂ ಹೋಗಲು ಸಾಧ್ಯವಾಗಿಲ್ಲ

ದೀಪಾ ಚೋಳನ್ ಮತ್ತು ರಾಜೇಂದ್ರ ಚೋಳನ್ ಕೊರೊನಾ ವಿರುದ್ಧ ನಿರಂತರ ಕರ್ತವ್ಯ ನಿರ್ವಹಿಸು ತ್ತಿದ್ದಾರೆ.ಈ ನಡುವೆ ದೀಪಾ ಚೋಳನ್ ಮೇ 26 ರಂದು ತಂದೆಯನ್ನು ಕಳೆದುಕೊಂಡು ಇಂದು ಅವರ ತಾಯಿ ಮೃತರಾಗಿದ್ದಾರೆ.ಇದಕ್ಕೂ ಮುನ್ನ ಧಾರವಾಡ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ದೀಪಾ ಚೋಳನ್ ಅವರಿಗೆ ಆ ದೇವರು ದುಃಖ ವನ್ನು ತಡೆದುಕೊಳ್ಳುವ ಶಕ್ತಿಯನ್ನು ಕೊಡಲಿ ಹಾಗೇ ಮೃತರಾದ ಇಬ್ಬರಿಗೆ ಧಾರವಾಡ ಜಿಲ್ಲೆಯ ಜನತೆ ಸಂತಾಪವನ್ನು ಸೂಚಿಸಿ ನಮನವನ್ನು ಸಲ್ಲಿಸಿದ್ದಾರೆ