ಬೆಂಗಳೂರು –
ಶ್ರೀಗಂಧ ಶೇಟ್ ಗೆ ಐಕಾನಿಕ್ ಯಂಗ್ ರೆಸ್ಟೋರೆಂಟ್ ಪ್ರಶಸ್ತಿ ಗೌರವ – ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ನಿಂದ ಪ್ರಶಸ್ತಿ ಪ್ರಧಾನ…..ಪುತ್ರನಿಗೆ ಪ್ರಶಸ್ತಿ ಗೌರವಕ್ಕೆ ಅಭಿನಂದನೆ ಸಲ್ಲಿಸಿದ ಗಣೇಶ ಶೇಟ್……
ಹೊಟೇಲ್ ಉಧ್ಯಮದೊಂದಿಗೆ ಹಗಲಿರುಳು ಸಾಮಾಜಿಕ ಸೇವೆಯನ್ನು ಮಾಡುತ್ತಿರುವ ಹುಬ್ಬಳ್ಳಿಯ ಯುವ ಹೊಟೇಲ್ ಉಧ್ಯಮಿ ಶ್ರೀಗಂಧ ಶೇಟ್ ಅವರಿಗೆ ಐಕಾನಿಕ್ ಯಂಗ್ ರೆಸ್ಟೋರೆಂಟ್ ಪ್ರಶಸ್ತಿ ಲಭಿಸಿದೆ.ಪ್ರತಿ ವರ್ಷ ಟೈಮ್ಸ್ ಆಫ್ ಗ್ರೂಪ್ ಸಂಸ್ಥೆ ನೀಡಿ ಗೌರವಿಸುತ್ತಿ ರುವ ಈ ಒಂದು ಪ್ರಶಸ್ತಿಗೆ ಈ ವರ್ಷ ಕೆಜೆಪಿ ಗ್ರೂಪ್ ಆಫ್ ಕಂಪನೀಜ್ ಅಧ್ಯಕ್ಷರಾಗುವ ಯುವ ಹೊಟೇಲ್ ಉಧ್ಯಮಿಯಾಗಿರುವ ಶ್ರೀಗಂಧ ಶೇಟ್ ಅವರು ಸಧ್ಯ ಐಶಾರಾಮಿ 9 ಹೊಟೇಲ್ ಗಳನ್ನು ನಡೆಸುತ್ತಿದ್ದಾರೆ.
ಐಶಾರಾಮಿ ಸೌಲಭ್ಯಗಳೊಂದಿಗೆ ಸ್ಟಾರ್ ಹೊಟೇಲ್ ಗಳ ಸೇವೆಯನ್ನು ಮತ್ತು ಶ್ರೀಗಂಧ ಶೇಟ್ ಅವರ ಸಾಮಾಜಿಕ ಕಾರ್ಯವನ್ನು ಗುರುತಿಸಿದ ಟೈಮ್ಸ್ ಆಫ್ ಇಂಡಿಯಾ ಸಂಸ್ಥೆಯೂ ಐಕಾನಿಕ್ ಯಂಗ್ ರೆಸ್ಟೋರೆಂಟ್ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಈ ಒಂದು ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಶ್ರೀಗಂಧ ಶೇಟ್ ಅವರಿಗೆ ಐಕಾನಿಕ್ ಯಂಗ್ ರೆಸ್ಟೋರೆಂಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾ ಯಿತು.
ನಗರದ ಹೊಟೇಲ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಒಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದರೊಂದಿಗೆ ರಾಯಲ್ ರಿಟ್ಜ್ ಹೊಟೇಲ್ ಮಡಿಲಿಗೆ ಪ್ರಶಸ್ತಿ ಲಭಿಸಿದ್ದು ಗೌರವ ಹೆಚ್ಚಿಸಿರುವ ವಿಚಾರ ಕುರಿತಂತೆ ಕೆಜಿಪಿ ಗ್ರೂಪ್ ಅಧ್ಯಕ್ಷರಾಗಿರುವ ಗಣೇಶ್ ಶೇಟ್ ಅವರು ಪ್ರಶಸ್ತಿಯನ್ನು ಪಡೆದ ಪುತ್ರನಿಗೆ ಅಭಿನಂದನೆ ಸಲ್ಲಿಸಿ ಶುಭವನ್ನು ಹಾರೈಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..