ಧಾರವಾಡ –
ಧಾರವಾಡ ಜಿಲ್ಲಾಸ್ಪತ್ರೆ ದಿನದಿಂದ ದಿನಕ್ಕೇ ಅತ್ಯಾಧುನಿಕ ಸ್ಪರ್ಶವನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಹತ್ತು ಹಲವಾರು ವೈಧ್ಯಕೀಯ ಸೇವೆಗಳನ್ನು ನೀಡುತ್ತಿರುವ ಜಿಲ್ಲಾಸ್ಪತ್ರೆಯಲ್ಲಿ ಈಗ ಮತ್ತೊಂದು ಸೌಲಭ್ಯ ದೊರಕಲಿದೆ. ಹೌದು ರೋಟರಿ ಕ್ಲಬ್ , KVG ಬ್ಯಾಂಕ್ ಮತ್ತು Logistimo India Pvt Ltd ಬೆಂಗಳೂರು ಈ ಮೂರು ಸಂಸ್ಥೆಗಳು ಜಿಲ್ಲಾಸ್ಪತ್ರೆಯಲ್ಲಿ ಕರೋನಾಗೆ ಐಸಿಯು ವಾರ್ಡ್ ಆರಂಭಿಸಿದ್ದಾರೆ.

ಬಡವರಿಗೆ ಕರೊನಾ ಸೋಂಕು ಕಾಣಿಸಿಕೊಂಡರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳೊದು ಅದರಲ್ಲೂ ಐಸಿಯು ಬೆಡ್ ದುಬಾರಿ. ಹೀಗಾಗಿ ಈ ಒಂದು ಸಮಸ್ಯೆಯನ್ನು ಅರಿತ ಈ ಮೂರು ಸಂಸ್ಥೆಗಳು CSR ಅಡಿಯಲ್ಲಿ 35 ಲಕ್ಷ ರೂಪಾಯಿ ನೀಡಿದ್ದಾರೆ.

ಈ ಮೂರು ಸಂಸ್ಥೆಗಳ ನೀಡಿದ 35 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಜಿಲ್ಲಾಸ್ಪತ್ರೆಯಲ್ಲಿ 12 ಸುಸಜ್ಜಿತ ಕೋವಿಡ್ ಐಸಿಯು ವಾರ್ಡ್ ಗಳು ಸಿದ್ದಗೊಂಡಿವೆ. 12 ವಾರ್ಡ್ ಆರಂಭಿಸಲಾಗಿದ್ದು ಎಲ್ಲಾ ಸೌಲಭ್ಯಗಳೊಂದಿಗೆ ಸಿದ್ದವಾಗಿದ್ದು ಐಸಿಯು ವಾರ್ಡ್ ಗಳನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೋಕಾರ್ಪಣೆ ಮಾಡಿ ಹಸ್ತಾಂತರಿಸಿದರು.ಇದೇ ವೇಳೆ ಐಸಿಯು ವಾರ್ಡ್ ನ್ನು ಕೇಂದ್ರ ಸಚಿವರು ವೀಕ್ಷಿಸಿ ಪರಿಶೀಲನೆ ಮಾಡಿದರು.

ಇನ್ನೂ ಸಮಾಜಮುಖಿಯಾದ ಈ ಒಂದು ಕಾರ್ಯಕ್ಕೇ ನೆರವಾದ ರೋಟರಿ ಕ್ಲಬ್ ,ಕೆವಿಜಿ ಬ್ಯಾಂಕ್ ,ಹಾಗೇ ಬೆಂಗಳೂರಿನ Logistimo India Pvt Ltd ಈ ಮೂರು ಸಂಸ್ಥೆಗಳ ಸಾಮಾಜಮುಖಿ ಕಾರ್ಯವನ್ನು ಶ್ಲಾಘಿಸಿ ಮೆಚ್ಚಿಗೆ ವ್ಯಕ್ತಪಡಿಸಿ ಅಭಿನಂದಿಸಿ ಅಭಿನಂದಿಸಿದ್ರು.ಇನ್ನೂ ಈ ಮೂರು ಸಂಸ್ಥೆಗಳು ಸಮಾಜ ಸೇವೆಗೆ ಮಾದರಿಯಾಗಿವೆ. ದುರ್ಬಲ ಹಾಗೂ ಬಡಜನರ ಏಳಿಗೆಗಾಗಿ ಈ ಸಂಸ್ಥೆಗಳು ಶ್ರಮಿಸುತ್ತಿವೆ. ಸಮಾಜದ ಜನರ ಶ್ರೇಯೋಭಿವೃದ್ಧಿಗಾಗಿ ಗುಣಮಟ್ಟದ ಶಿಕ್ಷಣ, ವೈದ್ಯಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಗಳು ನಿರ್ದಿಷ್ಟ ಯೋಜನೆಗಳನ್ನು ರೂಪಿಸಿ ಜನರಿಗೆ ಸೇವೆಗಳನ್ನು ತಲುಪಿಸುತ್ತಿರುವ ಕಾರ್ಯವೈಖರಿ ತುಂಬಾ ಶ್ಲಾಘನೀಯ ಎಂದರು.

ಅಲ್ಲದೇ ಮುಂದೆಯೂ ಇಂಥ ಒಳ್ಳೆಯ ಕಾರ್ಯಗಳು ಮುಂದುವರೆಯಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.ಈ ಸಂಧರ್ಭದಲ್ಲಿ ರೋಟರಿ ಸಂಸ್ಥೆಯ ಡಾ ಕವನ ದೇಶಪಾಂಡೆ,ಸುನೀಲ ಬಾಗೇವಾಡಿ, ಬೆಂಗಳೂರಿನ Logistimo India Pvt Ltd ಸಂಸ್ಥೆಯ ಮುಖ್ಯಸ್ಥರು ಹಾಗೇ ಕೆವಿಜಿ ಬ್ಯಾಂಕ್ ಅಧ್ಯಕ್ಷ ಪಿ ಗೋಪಿಕೃಷ್ಣ ಬ್ಯಾಂಕ್ ನ ಸಾರ್ವಜನಿಕರ ಸಂಪರ್ಕಾಧಿಕಾರಿ ಉಲ್ಲಾಸ ಗುಣಗಾ. ಇವರೊಂದಿಗೆ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಶಿವಕುಮಾರ ಮಾನಕರ ಆಸ್ಪತ್ರೆಯ ವೈಧ್ಯರು ಸಿಬ್ಬಂದ್ದಿಗಳಾದ ರಾಜೇಶ್ ಕೊನರಡ್ಡಿ, ಹಾಗೇ ಬಿಜೆಪಿ ಪಕ್ಷದ ಮುಖಂಡ ವಿರೇಶ ಅಂಚಟಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.