ಮಕ್ಕಳು ಶಾಲೆಗೆ ಬರದಿದ್ದರೆ ಅವರ ಮುಂದೆ ಮಲಗುತ್ತಾರೆ ಈ ಮುಖ್ಯೋಪಾಧ್ಯಾಯರು ವೈರಲ್ ಆಗಿದೆ ಪೊಟೊ…..

Suddi Sante Desk

ಸಂಗಾರೆಡ್ಡಿ (ತೆಲಂಗಾಣ)

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸುವಂತೆ ಪಾಲಕರ ಮನವೊಲಿಸಲು ಶಾಲಾ ಹೆಡ್ ಮಾಸ್ಟರ್ ಒಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.ಹೌದು ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವೊಲಿ ಸಲು ಮುಖ್ಯಾಧ್ಯಾಪಕರೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಸಂಗಾರೆಡ್ಡಿ ಜಿಲ್ಲೆಯ ಪುಳಕಲ್ ವಲಯದ ಮಾಣಿಕ್ಯಂ ಗ್ರಾಮದಲ್ಲಿ ಇಂತಹದ್ದೊಂದು ವಿಶಿಷ್ಟ ಪ್ರತಿಭಟನೆ ನಡೆದಿದ್ದು ಎಲ್ಲರ ಗಮನ ಸೆಳೆದಿದೆ.ಇಲ್ಲಿನ ಜಿಲ್ಲಾ ಪರಿಷದ್ ಸರ್ಕಾರಿ ಶಾಲೆಯಲ್ಲಿ 175 ಮಕ್ಕಳು ಓದುತ್ತಿದ್ದಾರೆ. ಇದರಲ್ಲಿ 8 ವಿದ್ಯಾರ್ಥಿಗಳು ಈ ವರ್ಷ ಶಾಲೆ ಆರಂಭವಾ ದಾಗಿನಿಂದಲೂ ಶಾಲೆಗೆ ಬರುತ್ತಿಲ್ಲ.ಇದನ್ನು ಗಮನಿಸಿದ ಮುಖ್ಯಾಧ್ಯಾಪಕ ಶ್ರೀಧರ ರಾವ್ ಪಾಲಕರ ಬಳಿ ವಿಚಾರಿ ಸಲು ಆ ಮಕ್ಕಳ ಮನೆಗೆ ಹೋಗಿದ್ದರು.

ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕರಿಗೆ ಮನವಿ ಮಾಡಿದರೂ ಅವರು ಜಗ್ಗಲಿಲ್ಲ ಆದರೆ ಇಷ್ಟಕ್ಕೆ ಪಟ್ಟು ಬಿಡದ ಮುಖ್ಯಾಧ್ಯಾಪಕ ಶ್ರೀಧರ್ ರಾವ್ ಆ ಮಕ್ಕಳ ಮನೆ ಮುಂದೆ ಮಲಗಿ ಪ್ರತಿಭಟನೆ ಆರಂಭಿಸಿಬಿಟ್ಟರು.ಇದನ್ನು ನೋಡಿದ ಪಾಲಕರು ಕೊನೆಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿದರು.

ಗ್ರಾಮದಲ್ಲಿ ಶಾಲೆಯಿಂದ ಹೊರಗುಳಿದ ಎಲ್ಲ ಮಕ್ಕಳು ಶಾಲೆಗೆ ಹಾಜರಾಗುವವರೆಗೂ ತಮ್ಮ ಈ ಪ್ರತಿಭಟನೆ ಮುಮದುವರಿಯಲಿದೆ ಎಂದು ಶ್ರೀಧರ್ ರಾವ್ ಹೇಳಿದ್ದಾರೆ ಸದ್ಯ ಮುಖ್ಯಾಧ್ಯಾಪಕರ ಪ್ರತಿಭಟನೆಯಿಂದ ಗ್ರಾಮದಲ್ಲಿ ವಿದ್ಯಾಭ್ಯಾಸದ ಮಹತ್ವದ ಬಗ್ಗೆ ಜನರಲ್ಲಿ ಹೊಸ ಸಂಚಲನ ಮೂಡಿದ್ದು ಮಾತ್ರ ಸತ್ಯ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.