ಧಾರವಾಡ –
ಡಿಕೆಶಿಗೆ ದಮ್ ಇದ್ದರೇ ಸಿದ್ದರಾಮಯ್ಯ ಮೇಲೆ ಕ್ರಮ ಕೈಗೊಳ್ಳಲಿ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಪಕ್ಷದ ಪರಿಸ್ಥಿತಿ ನೋಡಿ ಗಾಬರಿಯಾಗಿದ್ದಾರೆ.
ಪಕ್ಷದಲ್ಲಿದ್ದವರು ಯಾವ ಪಕ್ಷಕ್ಕೆ ಹೋಗ್ತಾರೊ? ಎಲ್ಲಿ ಉಳಿತಾರೋ ಒಂದೂ ಅವರಿಗೆ ಅರ್ಥವಾಗ್ತುತ್ತಿಲ್ಲ . ಕಾಂಗ್ರೆಸ್ ಪಕ್ಷ ರಾಜ್ಯ, ದೇಶದಲ್ಲಿ ನಿರ್ನಾಮ ಆಗುತ್ತಿದೆ.
ಮುಳುಗಿ ಹೋಗುವ ಹಡಗಿನಲ್ಲಿ ಯಾರ ಉಳಿತಾರೆ ಹೇಳಿ .ಹೀಗಾಗಿ ಚೆಲ್ಲಾಪಿಲ್ಲಿಯಾಗಿ ಹೋಗುತ್ತಿದ್ದಾ ರೆಂದರು.ಈ ಮಧ್ಯೆ ನಾನೇ ಸಿಎಂ, ನಾನೇ ಸಿಎಂ ಅಂತಾ ಸ್ಪರ್ಧೆ ನಡೆದಿದೆ.
ಡಿಕೆಶಿ ಮತ್ತು ಸಿದ್ದರಾಮಯ್ಯ ಮಧ್ಯೆ ನಾನೇ ಸಿಎಂ ಸ್ಪರ್ಧೆ ನಡೆದಿದೆ. ಕಾಂಗ್ರೆಸ್ ಗರು ಸಿಎಂ ಆಗೋದು ಇನ್ನು ಈ ಜನ್ಮದಲ್ಲಿ ಸಾಧ್ಯವಿಲ್ಲ. ಆದರೆ ಅವರಿಬ್ಬರಿಗೆ ಸಿಎಂ ಆಗುವ ಹಗಲುಗನಸು ಬೀಳುತ್ತಿದೆ.
ಸಿದ್ದರಾಮಯ್ಯ ಮುಂದಿನ ಸಿಎಂ ಅಂತಾ ಅವರೇ ಹೇಳಿಕೊಳ್ಳುತ್ತಾರೆ.ಜನ ವೋಟ್ ಕೊಡೊದು ಬೇಡ, ಕೇಂದ್ರ ನಾಯಕರೂ ಹೇಳೋದು ಬೇಡ. ಆದರೂ ನಾನೇ ಮುಖ್ಯಮಂತ್ರಿ ಅಂತಾರೆ. ಇದನ್ನು ಕಾಂಗ್ರೆಸಿಗರು ಖಂಡನೆ ಮಾಡಬೇಕು.ಡಿಕೆಶಿ ದಮ್ ಬಗ್ಗೆ ಬಹಳ ಮಾತನಾಡ್ತಾರೆ.ದಮ್.. ದಮ್.. ದಮ್ ಅಂತಾ ಹೇಳತಾನೇ ಇರ್ತಾರೆ ಡಿಕೆಶಿಗೆ ದಮ್ ಇದ್ದರೆ ಸಿದ್ದರಾಮಯ್ಯ ಮೇಲೆ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿ ಅಂತಾ ಘೋಷಣೆ ಮಾಡಿಕೊಳ್ಳಿ ಅಧಿಕಾರ ನಿನಗಿಲ್ಲ ಅಂತಾ ಹೇಳಬೇಕು ನಾನೇ ಮುಖ್ಯಮಂತ್ರಿ ಅನಬೇಡ ಅಂತಾ ಹೇಳಬೇಕೆಂದು ಒತ್ತಾಯಿಸಿದರು.