ಚೆನ್ನೈ –
ಅಧಿಕಾರಕ್ಕೆ ಬರಲು ಅಧಿಕಾರದ ಗದ್ದುಗೆ ಏರಲು ಏನೇನು ಭರವಸೆ ಏನೇನು ಆಸೆ ಆಕಾಂಕ್ಷೆಗಳನ್ನು ರಾಜಕೀಯ ನಾಯಕರು ನೀಡತಾರೆ ಎನ್ನೊದಕ್ಕೆ ಈ ಸ್ಟೊರಿ ಸಾಕ್ಷಿ. ಹೌದು ನಮ್ಮ ಪಕ್ಷ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಕಾಫಿ ಹೊಡೆಯಲು ಅವಕಾಶ ಮಾಡಿ ಕೊಡಲಾಗು ವುದು ಎಂದು ಡಿಎಂಕೆ ಹಿರಿಯ ನಾಯಕ ಕೆಎಂ ನೆಹರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಿರುಚಿ ರಾಪಳ್ಳಿಯಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಮಾತನಾಡಿದ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಮಧ್ಯಪ್ರದೇಶ, ಬಿಹಾರ್ ಹಾಗೂ ಉತ್ತರ ಪ್ರದೇಶ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಪಾಸಾಗುತ್ತಾರೆ. ಇದಕ್ಕೆ ಕಾರಣ, ಅಲ್ಲಿನ ವಿದ್ಯಾರ್ಥಿಗಳಿಗೆ ಕಾಫಿ ಹೊಡೆಯಲು ಅವಕಾಶ ಇದೆ ಎಂಬುದು ನನಗೆ ಗೊತ್ತು. ತಮಿಳು ನಾಡಿನಲ್ಲಿ ನಾವು ಅಧಿಕಾರಕ್ಕೆ ಬಂದರೆ ನೀಟ್ ಪರೀಕ್ಷೆಯಲ್ಲಿ ನಿಮಗೆ ಕಾಫಿ ಹೊಡೆಯಲು ಅವಕಾಶ ಮಾಡಿ ಕೊಡುತ್ತೇವೆ.ಚಿಂತಿಸಬೇಡಿ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದ್ದಾರೆ.ನೀಟ್ ಪರೀಕ್ಷೆಯಲ್ಲಿ ನಮ್ಮ ಹುಡುಗರು ಹೆಚ್ಚಿನ ಸಂಖ್ಯೆ ಯಲ್ಲಿ ಪಾಸಾಗದಿದ್ದರೇ ನಾವು ಅಧಿಕಾರಕ್ಕೆ ಬಂದರೂ ಏನೂ ಪ್ರಯೋಜನ ಎಂದು ಅವರು ಪ್ರಶ್ನಿಸಿದ್ದಾರೆ. ನೆಹರು ಅವರ ಈ ಹೇಳಿಕೆ ವಿರೋಧ ಪಕ್ಷಗಳಿಗೆ ಅಸ್ತ್ರ ಕೊಟ್ಟಂತಾಗಿದೆ. ಈ ಹಿಂದೆ ಡಿಎಂಕೆ ಸರ್ಕಾರದ ಅವಧಿಯಲ್ಲಿ ನೆಹರು ಅವರು ಸಾರಿಗೆ ಸಚಿವರಾಗಿದ್ದರು