ಧಾರವಾಡ –
ನವನಗರದಲ್ಲಿ ಪೊಲೀಸರು ಮತ್ತು ವಕೀಲರ ನಡುವೆ ನಡೆದ ಗಲಾಟೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಈಗಾಗಲೇ ಜಾಮೀನಿನ ಮೇಲೆ ವಕೀಲರಾದ ವಿನೋದ ಪಾಟೀಲ್ ಬಿಡುಗಡೆಯಾಗಿದ್ದು ,ಇತ್ತ ನವನಗರ ಪೊಲೀಸ್ ಠಾಣೆಯಿಂದ ಇನ್ಸ್ಪೆಕ್ಟರ್ ಪ್ರಭು ಸೂರಿನ ಅವರನ್ನು ವರ್ಗಾವಣೆ ಮಾಡಲಾಗಿದೆ.ಇಷ್ಟಕ್ಕೆ ಸುಮ್ಮನಾಗದ ವಕೀಲರು ಇಂದು ಧಾರವಾಡದಲ್ಲಿ ಎರಡು ಸಭೆ ಮಾಡಿದರು.
ಅಂತಿಮವಾಗಿ ಮಧ್ಯಾಹ್ನ ನಡೆದ ಸಭೆಯಲ್ಲಿ ವಕೀಲರಾದ ವಿನೊದ ಪಾಟೀಲರ ಮೇಲೆ ಹಲ್ಲೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಬೇಡಿ ಹಾಕಿ ಅಮಾನವಿಯಾಗಿ ನಡೆದುಕೊಂಡ CPI ಪ್ರಭು ಸುರಿನ್ ವಿರುದ್ದ ಕಾನೂನು ಕ್ರಮ ಜರುಗಿಸುವ ಇತ್ತಾಯ ಕೇಳಿ ಬಂದಿತು.ಈ ಕುರಿತು ಧಾರವಾಡ ವಕೀಲರ ಸಂಘದಿಂದ ಪ್ರತಿಭಟನೆ ಮಾಡಿ ಆಗ್ರಹಿಸಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ.ಹೀಗಾಗಿ ಈ ಒಂದು ಧೊರಣೆ ಖಂಡಿಸಿ ಧಾರವಾಡ ವಕೀಲರ ಸಂಘದಲ್ಲಿ ಸಭೆ ನಡೆಸಲಾಯಿತು.
ಘಟನೆಗೆ ಕಾರಣರಾದ CIP ಪ್ರಭು ಸುರಿನ್ ಇವರನ್ನು ನಾಳೆ ಮದ್ಯಾಹ್ನದ ಒಳಗಡೆ ಅಮಾನತ್ತು ಮಾಡಬೇಕು ಮತ್ತು ಅಮಾನವೀವಾಗಿ ನಡೆದುಕೊಂಡ ಪೋಲಿಸರ ವಿರುದ್ದ ಪ್ರಿರ್ಯಾದಿ ದಾಖಲಿಸಿ ಬಂದನ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.ನಾಳೆ ವಕೀಲರು ಸ್ವಯಂಪ್ರೇರಿತವಾಗಿ ನ್ಯಾಯಾಲಯದ ಕಾರ್ಯ ಕಲಾಪಗಳಿಗೆ ಹಾಜರಗದಿರಲು ಹಾಗೂ ಈ ಘಟನೆ ಕುರಿತು ಚರ್ಚೆ ನಡೆಸಲು ನಾಳೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕಲಘಟಗಿ, ನವಲಗುಂದ, ಕುಂದಗೋಳ ವಕೀಲರ ಸಂಘದ ಫಧಾದಿಕಾರಿಗಳ ಸಭೆಯನ್ನು ಮದ್ಯ್ಹಾನ 2-00 ಗಂಟೆ ಕರೆಯಲಾಗಿದೆ.ಇನ್ನೂ ಇವೆಲ್ಲದರ ನಡುವೆ ವಕೀಲರಾದ ವಿನೋದ ಪಾಟೀಲ್ ಅವರ ಕೈಗೆ ಕೋಳ ಹಾಕಿದ ನವನಗರ ಪೊಲೀಸ್ ಠಾಣೆ ಮುಖ್ಯ ಪೇದೆ ಸಂತೋಷ ನನ್ನು ಹಿರಿಯ ಪೋಲಿಸ್ ಅಧಿಕಾರಿಗಳು ಅಮಾನತ್ತು ಮಾಡಿಧಾರೆ.