ಜಕಾರ್ತ –
ಅಪ್ರಾಪ್ತ ವಯಸ್ಸಿನ 13 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ ಅಪರಾಧದಲ್ಲಿ ಶಿಕ್ಷಕನಿಗೆ ಇಂಡೊ ನೇಶ್ಯಾದ ನ್ಯಾಯಾಲಯ ಜೀವಾವಧಿ ಶಿಕ್ಷೆ ಜಾರಿಗೊಳಿಸಿದೆ.
ಧಾರ್ಮಿಕ ವಸತಿ ಶಾಲೆಯಲ್ಲಿ ನಡೆದಿದ್ದ ಈ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು.ಬಡವರ್ಗದ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಶಾಲೆಯಲ್ಲಿ ಶಿಕ್ಷಕನಾಗಿದ್ದ ಹೆರೀ ವೀರಾವನ್ ಎಂಬ ಶಿಕ್ಷಕ 13 ವಿದ್ಯಾರ್ಥಿ ನಿಯರ ಮೇಲೆ ಅತ್ಯಾಚಾರ ಎಸಗಿದ್ದು ಇದರಲ್ಲಿ ಕನಿಷ್ಟ 8 ಬಾಲಕಿಯರು ಗರ್ಭವತಿಯಾಗಿದ್ದರೆಂದು ಆರೋಪ ಪಟ್ಟಿ ಯಲ್ಲಿ ಉಲ್ಲೇಖಿಸಲಾಗಿತ್ತು.

ಓರ್ವ ಬಾಲಕಿಯ ಆರೋಗ್ಯ ದಲ್ಲಿ ಏರುಪೇರಾದ ಹಿನ್ನೆಲೆ ಯಲ್ಲಿ ಮನೆಯವರು ಆಸ್ಪತ್ರೆಗೆ ದಾಖಲಿಸಿದಾಗ ಗರ್ಭವತಿ ಯಾಗಿರುವುದು ಬೆಳಕಿಗೆ ಬಂದಿದೆ.ಬಳಿಕ ಬಾಲಕಿ ನೀಡಿದ ಮಾಹಿತಿಯ ಮೇರೆಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.ವಿಚಾರಣೆ ಸಂದರ್ಭ ಆರೋಪಿ ಶಿಕ್ಷಕ ಒಟ್ಟು 13 ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದು ಸಾಬೀತಾ ಗಿದೆ ಎಂದು ನ್ಯಾಯಾಧೀ ಶರು ತೀರ್ಪು ನೀಡಿದ್ದಾರೆ.





















