ಬೆಂಗಳೂರು –
ಶಿಕ್ಷಕರ ವರ್ಗಾವಣೆಯ ವಿಚಾರದಲ್ಲಿ ನಾಡಿನ ಶಿಕ್ಷಕರು ಸಂಘಟನೆಯ ನಾಯಕರ ವಿರುದ್ಧ ಸಿಡಿದೆದ್ದಿದ್ದಾರೆ ಹೌದು ವರ್ಗಾವಣೆಯ ವಿಷಯದಲ್ಲಿ ಶಿಕ್ಷಕರಿಗೆ ಪದೇ ಪದೇ ಅನ್ಯಾಯ ಆಗುತ್ತಿದ್ದು ಹೀಗಾಗಿ ಶಿಕ್ಷಕರ ಸಮಸ್ಯೆ ಗೆ ಸ್ಪಂದಿಸಿ ನ್ಯಾಯ ಕೊಡಿಸಬೇಕಾದ ಸಂಘಟನೆಯ ನಾಯಕರ ವಿರುದ್ಧ ಈಗ ನಾಡಿನ ವರ್ಗಾವಣೆಯಿಂದ ವಂಚಿತರಾದ ಶಿಕ್ಷಕರು ಸಿಡಿದೆದ್ದಿದ್ದಾರೆ
ಅಸಮಾಧಾನ ಗೊಂಡ ಶಿಕ್ಷಕರು ಸಾಮಾಜಿಕ ಜಾಲ ತಾಣಗಳಲ್ಲಿ ವಿಶೇಷವಾದ ಸಂದೇಶದ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.ಸಂಘದವರೆಲ್ಲರೂ ಈ ಆಡಿಯೋವನ್ನು ಕೇಳಿ ತಮ್ಮ ತಮ್ಮ ಸ್ಥಾನಗಳಿಗೆ ರಾಜಿನಾಮೆ ಕೊಟ್ಟು ಬಳೆ ತೊಟ್ಟುಕೊಂಡು ಮನೆಗೆ ಹೋಗಿರಿ ನಿಮಗೆ ಮಾನ ಮರ್ಯಾದೆ ಏನಾದರೂ ಇದ್ರೆ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಯಾದವರಿಗೆ ಅನುಕೂಲವನ್ನು ಮಾಡಿ ಕೊಟ್ಟ ಹಾಗೆ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೂ ಅನುಕೂಲ ಮಾಡಿಕೊಡಿ.ಆಗಲ್ಲ ಅಂದ್ರೆ ತಂತಂಮ್ಮ ಸ್ಥಾನಗಳಿಗೆ ರಾಜಿನಾಮೆ ಕೊಟ್ಟು ಮನಿಗಿ ಬರ್ರಿ ಎಂದು ಉಲ್ಲೇಖ ಮಾಡಿ ಖಡಕ್ ಸಂದೇಶವೊಂದನ್ನು ವೈರಲ್ ಮಾಡಿದ್ದಾರೆ.