ಬೆಂಗಳೂರು –
ಮಕ್ಕಳನ್ನು ಬೈಕ್ ನಲ್ಲಿ ಶಾಲೆಗೆ ಬೀಡುತ್ತಿದ್ದಿರಾ ಮೊದಲು ಈ ಸ್ಟೋರಿ ನೋಡಿ – ನಿಮ್ಮ ಮತ್ತು ಮಕ್ಕಳ ರಕ್ಷಣೆಗಾಗಿ ಪೊಲೀಸರಿಂದ ದಿಟ್ಟ ಹೆಜ್ಜೆ
ಹೌದು ಬೈಕ್ ನಲ್ಲಿ ಮಕ್ಕಳನ್ನು ಕರೆದುಕೊಂಡು ಶಾಲೆಗೆ ಬಿಡುವ ಸಮಯದಲ್ಲಿ ಕೆಲವೊಂದಿಷ್ಟು ಅಪಘಾತಗಳು ಅವಘಡಗಳು ನಡೆಯುತ್ತಿದ್ದು ಈ ಒಂದು ಕುರಿತಂತೆ ದೂರುಗಳು ಬಂದ ಹಿನ್ನಲೆಯಲ್ಲಿ ಇದನ್ನು ಗಂಭೀರವಾಗಿ ತಗೆದು ಕೊಂಡಿರುವ ಪೊಲೀಸರು ಸಾರಿಗೆ ಇಲಾಖೆಯ ವರು ದಿಟ್ಟವಾದ ಹೆಜ್ಜೆಯನ್ನು ಇಟ್ಟಿದ್ದಾರೆ.
ರಾಜ್ಯಾದ್ಯಂತ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಡೋದಕ್ಕೆ ಪೋಷಕರು ಗಡಿಬಿಡಿಯಲ್ಲಿ ಟು ವೀಲರ್‌ನಲ್ಲಿ ಓಡಾಡೋದು ಸಾಮಾನ್ಯವಾಗಿರು ವಾಗ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳದ ಮತ್ತು ಅಪಘಾತಗಳಿಂದಾಗಿ ಅವಘಡಗಳನ್ನು ತಪ್ಪಿಸಲು ಸಧ್ಯ ಪೊಲೀಸರು ಮುಂದಾಗಿದ್ದಾರೆ
ರಾಜ್ಯಾದ್ಯಂತ ಬೈಕ್ಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ ಮಕ್ಕಳನ್ನು ಹಿಂದೆ ಮುಂದೆ ಕೂರಿಸಿಕೊಂಡು ಹೋಗುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.ಮಕ್ಕಳನ್ನು ಬೈಕ್ಗಳಲ್ಲಿ ಕರೆದುಕೊಂಡು ಹೋಗುವಾಗ ಸೇಫ್ಟಿ ಹಾರ್ನೆಸ್ ಬೆಲ್ಟ್ ಹಾಕದಿದ್ದರೆ ಕೇಸ್ ಹಾಕಲಾ ಗುತ್ತದೆ ಮತ್ತು ಐನೂರರಿಂದ ಒಂದು ಸಾವಿರ ರೂಪಾಯಿ ವರೆಗೆ ದಂಡ ವಿಧಿಸುವ ಯೋಜನೆ ಯಲ್ಲಿ ಮುಂದಾಗಿದ್ದಾರೆ.
9 ತಿಂಗಳು ಮೇಲ್ಪಟ್ಟ ಹಾಗೂ 4 ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಸೇಫ್ಟಿ ಬೆಲ್ಟ್ ಕಡ್ಡಾಯ ವಾಗಿದ್ದು ಕೇಂದ್ರ ಮೋಟಾರು ವಾಹನ ನಿಯಮಾ ವಳಿ 1989ರ ನಿಯಮ 138 (7) ಅನ್ವಯ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳು ಸೇಫ್ಟಿ ಹಾರ್ನಸ್ ಧಾರಣೆ ಮಾಡುವುದು ಕಡ್ಡಾಯವಾಗಿದ್ದು
ಜುಲೈ ಮೊದಲ ವಾರದಲ್ಲಿ ಪೋಷಕರು ಮತ್ತು ಶಾಲೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲು ಮುಂದಾಗಿದ್ದು ಈ ಒಂದು ಹೊಸ ದಿಟ್ಟ ಹೆಜ್ಜೆಗೆ ಹೇಗೆ ಸ್ಪಂದನೆ ಸಿಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..