ಧಾರವಾಡ –
ಕ್ರಿಕೆಟ್ ಆಡಬೇಡಿ.ಮಾಸ್ಕ್ ಹಾಕಿಕೊಳ್ಳಿ ಎಂದು ತಿಳಿ ಹೇಳಿದ್ದಕ್ಕೆ ಗ್ರಾಮ ಪಂಚಾಯತಿ ಪಿಡಿಒ ಮೇಲೆ
ಯುವಕನೊಬ್ಬನೊಬ್ಬ ಹಲ್ಲೆ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ಹಳ್ಳಿಗೇರಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಹಳ್ಳಿಗೇರಿ ಗ್ರಾಮ ಪಂಚಾ ಯತಿ ಪಿಡಿಓ ಮೃತ್ಯುಂಜಯ ಮೆಣಸಿನಕಾಯಿ ಎಂಬುವವರೇ ಹಲ್ಲೆಗೊಳಗಾದ ಪಿಡಿಓ ಆಗಿದ್ದಾರೆ

ಗ್ರಾಮದ ಮೈದಾನದಲ್ಲಿ ಕೆಲ ಯುವಕರು ಕ್ರಿಕೆಟ್ ಆಡುತ್ತಿದ್ದರು.ಈ ವೇಳೆ ಕ್ರಿಕೆಟ್ ಆಡಬೇಡಿ. ಸೆಮಿ ಲಾಕ್ಡೌನ್ ಇದೆ. ಮನೆಗೆ ಹೋಗಿ ಎಲ್ಲರೂ ಮಾಸ್ಕ್ ಧರಿಸಿಕೊಳ್ಳಿ ಎಂದು ಹೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆ
ಹಲ್ಲೆ ಮಾಡುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿದ ಸ್ಥಳಿಕರು.ಆ ವಿಡಿಯೋ ಇದೀಗ ವೈರಲ್ ಆಗಿದ್ದು ಪೊಲೀಸರು ಏನು ಮಾಡತಾರೆ ಎಂಬು ದನ್ನು ಕಾದು ನೋಡಬೇಕು.