ಧಾರವಾಡ –
ಬಿಡುವಿಲ್ಲದ ಕರ್ತವ್ಯದ ನಡುವೆಯೂ ಕೂಡಾ ಧಾರವಾಡದ ಸಂಚಾರಿ ಪೊಲೀಸರು ನಿಜಕ್ಕೂ ಕೂಡಾ ಸಾಮಾಜಿಕ ಜವಾಬ್ದಾರಿಯ ಕೆಲಸವನ್ನು ಮಾಡಿದ್ದಾರೆ.
ಹೌದು ಧಾರವಾಡದ NTTF ಬಳಿ ಜಾಹೀರಾತಿನ ಬ್ಯಾನರ್ ವೊಂದು ಹರಿದು ರಸ್ತೆಯ ಪಕ್ಕದಲ್ಲಿನ ವಿದ್ಯುತ್ ಕಂಬದ ಮೇಲೆ ಬಿದ್ದಿತ್ತು. ಈ ಒಂದು ವಿಚಾರ ಕುರಿತಂತೆ ಸಾರ್ವಜ ನಿಕರು ಪೊನ್ ಮಾಡಿ ಮಾಹಿತಿಯನ್ನು ನೀಡಿದರು. ಮಾಹಿತಿ ಬರುತ್ತಿದ್ದಂತೆ ಇದು ನಮಗೆ ಬರೊದಿಲ್ಲವೆಂದು ಸುಮ್ಮನೇ ಕುಳಿತುಕೊಳ್ಳದ ಇವರು ಮೇಲಾಧಿಕಾರಿಗಳ ಗಮನಕ್ಕೆ ವಿಚಾರವನ್ನು ತಗೆದುಕೊಂಡು ಬಂದು ಸ್ಥಳಕ್ಕೇ ತೆರಳಿದರು.
ವಿದ್ಯುತ್ ತಂತಿಯ ಮೇಲೆ ಹರಿದು ಬಿದ್ದು ಜೋತಾಡುತ್ತಿದ್ದ ಬ್ಯಾನರ್ ಮತ್ತೊಂದು ಕಡೆಗೆ ಧಾರಾಕಾರವಾಗಿ ಸುರಿಯು ತ್ತಿರುವ ಮಳೆ ಹೀಗಾಗಿ ಏನಾದರೂ ದೊಡ್ಡ ಅನಾಹುತ ವಾಗಬಾರದು ಎಂದುಕೊಂಡು ಹೆಸ್ಕಾಂ ಸಿಬ್ಬಂದಿಗಳನ್ನು ಕರೆಯಿಸಿ ಕೂಡಲೇ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ಬ್ಯಾನರ್ ಗಳನ್ನು ತೆರುವು ಮಾಡಿದರು.
ಇದರೊಂದಿಗೆ ತಮ್ಮದಲ್ಲದಿದ್ದರೂ ಕೂಡಾ ಕರ್ತವ್ಯದ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಎಎಸ್ ಐ ಅಧಿಕಾರಿಗ ಳಾದ ಬಸಣ್ಣಾ ಕುರಿ,ವಿರೇಶ ಬಳ್ಳಾರಿ ಸೇರಿದಂತೆ ಹಲವರು ಈ ಒಂದು ಕಾರ್ಯದಲ್ಲಿ ಪಾಲ್ಗೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದರು.