ಹುಬ್ಬಳ್ಳಿ-
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ ನಡೆದಿದೆ. ಡಿ.11 ರಂದು ನಡೆದಿದ್ದ ಗಲಾಟೆಯಲ್ಲಿ ಇಲಿಯಾಸ್ ಅಹ್ಮದ್ ಚಿಕಿತ್ಸೆ ಫಲಿಸದೇ ಇಂದು ಸಾವಿಗೀಡಾಗಿದ್ದಾನೆ.

ಅಪರಿಚಿತ ದುಷ್ಕರ್ಮಿಗಳಿಂದ ಇಲಿಯಾಸ್ ದಾಳಿಗೊಳಗಾಗಿದ್ದನು. ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎಗ್ ರೈಸ್ ಅಂಗಡಿ ಮಾಡಿಕೊಂಡಿದ್ದ ಇಲಿಯಾಸ್ ಕಾರ್ಪೋರೇಶನ್ ನಿಂದ ಚೀಟಿ ತೆಗೆಯುವವರಿಂದ ಹಲ್ಲೆ ನಡೆದಿದೆ ಎಂದು ಆರೋಪ ಕೇಳಿ ಬಂದಿತ್ತು.
ಇವನ ಸ್ನೇಹಿತರೇ ಇವನ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂಬ ಮಾತುಗಳು ಕೂಡಾ ಕೇಳಿ ಬಂದಿದ್ದವು. ಮೃತ ಇಲಿಯಾಸ್ ಸ್ನೇಹಿತರೇ ಅಥವಾ ಅಪರಿಚಿತರೋ ಮಾಡಿದ್ದಾರೊ ಎಂಬ ಕುರಿತಂತೆ ದೂರು ದಾಖಲು ಮಾಡಿಕೊಂಡಿರು ಶಹರ ಠಾಣೆ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.
ದಾಳಿಗೊಳಗಾಗಿ ನಾಲ್ಕು ದಿನಗಳ ನಂತರ ಇಂದು ಇಲಿಯಾಸ್ ಸಾವಿಗೀಡಾಗಿದ್ದು ಇತ್ತ ಪೊಲೀಸರು ಆರೋಪಿಗಳ ಬಂಧನಕ್ಕೇ ಶಹರ ಠಾಣೆ ಪೊಲೀಸರು ಜಾಲ ಬೀಸಿದ್ದಾರೆ.