ಬೆಂಗಳೂರು –
ಕರ್ನಾಟಕ ಸರ್ಕಾರ ಸರ್ಕಾರಿ ನೌಕರರು ಒಂದು ಬಾರಿಗೆ ಪಡೆಯಬಹುದಾದ ಗರಿಷ್ಠ ಸಾಂದರ್ಭಿಕ ರಜೆಯ ಮಿತಿಯನ್ನು ನಿರ್ಬಂಧಿಸುವ ಬಗ್ಗೆ ಆದೇಶ ಹೊರಡಿಸಿದೆ.ಸಾಂದರ್ಭಿಕ ರಜೆಯ ಅರ್ಹತೆ ಮತ್ತು ಮಂಜೂರಾತಿ ಬಗ್ಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ಅನುಬಂಧ ಬಿ ರಲ್ಲಿನ ಇತರೆ ಷರತ್ತುಗಳು ಮುಂದುವರೆಯು ತ್ತವೆ ಎಂದು ಸ್ಪಷ್ಟಪಡಿಸಲಾಗಿದೆ.
ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ-2 ಜಿ. ಜಿ. ಹೇಮಣ್ಣ ಈ ಕುರಿತು ಆದೇಶ ಹೊರಡಿಸಿದ್ದಾರೆ.ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ 15 ದಿವಸಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಆದೇಶಿಸಲಾಗಿತ್ತು.
ನಂತರ, 15 ದಿವಸಗಳ ಸಾಂದರ್ಭಿಕ ರಜೆಯನ್ನು 10 ದಿವಸಗಳಿಗೆ ಇಳಿಸಿ ಆದೇಶಿಸಲಾಗಿದೆ ಎಂದು ಹೇಳಿದೆ.ಕರ್ನಾಟಕ ನಾಗರೀಕ ಸೇವಾ ನಿಯಮಾ ವಳಿಯ ಅನುಬಂಧ-ಬಿ ಯ ನಿಯಮ(1) ರನ್ವಯ 15 ದಿನಗಳ ಸಾಂದರ್ಭಿಕ ರಜೆ ಜಾರಿ ಯಲ್ಲಿದ್ದ ಸಂದರ್ಭದಲ್ಲಿ ಒಂದು ಬಾರಿಗೆ ಪಡೆ ಯಬಹುದಾದ ಗರಿಷ್ಠ ಸಾಂದರ್ಭಿಕ ರಜೆಯ ಮಿತಿಯನ್ನು 7 ದಿನಗಳಿಗೆ ಸೀಮಿತಗೊಳಿಸಿ ಸಾರ್ವತ್ರಿಕ ರಜೆಯೊಂದಿಗೆ ಸಂಯೋಜಿಸಿದಾಗ ಈ ಅವಧಿಯನ್ನು 10 ದಿವಸಗಳಿಗೆ ನಿರ್ಭಂದಿಸಿ ಅವಕಾಶ ಕಲ್ಪಿಸಲಾಗಿತ್ತು
ಸಾಂದರ್ಭಿಕ ರಜೆಯನ್ನು 10 ದಿವಸಗಳಿಗೆ ಇಳಿಸಿರುವ ಹಿನ್ನೆಲೆಯಲ್ಲಿ ಒಂದು ಬಾರಿಗೆ ಪಡೆಯಬಹುದಾದ ಗರಿಷ್ಠ ಸಾಂದರ್ಭಿಕ ರಜೆಯನ್ನು 5 ದಿನಗಳೆಂದು ನಿರ್ಬಂಧಿಸಲು ಹಾಗೂ ಸಾರ್ವತ್ರಿಕ ರಜೆಯೊಂದಿಗೆ ಸಂಯೋ ಜಿಸಿದಾಗ ಈ ಅವಧಿಯನ್ನು 8 ದಿವಸಗಳಿಗೆ ನಿರ್ಭಂದಿಸಿ ಅವಕಾಶ ಕಲ್ಪಿಸಲು ನಿರ್ಧರಿಸ ಲಾಗಿದೆ. ಆದ್ದರಿಂದ, ಈ ಆದೇಶವನ್ನು ಹೊರಡಿಸಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..