ಹುಬ್ಬಳ್ಳಿ –
ವರ್ಗಾವಣೆಗಾಗಿ ಬೆಂಗಳೂರು ಚಲೋ ವೇದಿಕೆ
ಆತ್ಮೀಯ ರಾಜ್ಯದ ವರ್ಗಾವಣೆ ಅಪೇಕ್ಷಿತ ಶಿಕ್ಷಕರಿಗೆ ಈ ಮೂಲಕ ತಿಳಿಸುವುದೇನೆಂದರೆ.ವರ್ಗಾವಣೆಗಾಗಿ ಬೆಂಗಳೂರು ಚಲೋ ವೇದಿಕೆ ಮೂಲಕ ಈಗಾಗಲೇ 44 ವೇಬಿನಾರ್ ಮೀಟಿಂಗ್ ಗಳನ್ನು ಮಾಡಲಾಗಿದ್ದು ಇಲ್ಲಿಯವರೆಗೂ ಅನೇಕ ನೂರಾರು/ ಸಾವಿರಾರು ಶಿಕ್ಷಕರು ತಮ್ಮ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡಿ ದ್ದಾರೆ.

ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಗುರುಮಾತೆಯರು ಇರುವುದರಿಂದ ಕರ್ತವ್ಯ ಸಂದರ್ಭದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಿವೆ.ಹಾಗೂ ಸರ್ಕಾರದ ಅವೈಜ್ಞಾನಿಕ ನಿಯಮಗಳಿಂದ ಇದುವರೆಗೂ ಶಿಕ್ಷಕರಿಗೆ ವರ್ಗಾವಣೆ ಆಗುತ್ತಿಲ್ಲ ಅಲ್ಲದೆ ರಾಜ್ಯದ ಪ್ರತಿಯೊಂದು ತಾಲ್ಲೂಕು/ ಜಿಲ್ಲೆಗಳಲ್ಲಿ ೨೫% ಈ ನಿಯಮವನ್ನು ಜಾರಿಗೆ ತಂದಿರುವುದರಿಂದ ಸಾವಿರಾರು ಶಿಕ್ಷಕರುಗಳಿಗೆ ತಮ್ಮ ತಮ್ಮ ಜಿಲ್ಲೆ ಗಳಿಗೆ ಹೋಗಲಿಕ್ಕೆ ಅಸಾಧ್ಯವಾಗಿದೆ ಆದ್ದರಿಂದ ಇದೇ ತೆರನಾದ ಇನ್ನೂ ಅನೇಕ ನಿಯಮಗಳಿವೆ.ಇಲ್ಲಿ ಯಾವುದಕ್ಕೂ ಒತ್ತು ಕೊಡದೇ ಸೇವಾವಧಿಯಲ್ಲಿ ೧ ಸಲ ತಮ್ಮ ತಮ್ಮ ಸ್ವಂತ ಜಿಲ್ಲೆಗೆ ಹೋಗಲು ಅವಕಾಶ ಕೋರಿ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದ್ದು ವರ್ಗಾವಣೆ ಅಪೇಕ್ಷಿತ ಶಿಕ್ಷಕರೆಲ್ಲರೂ ತಮ್ಮೆಲ್ಲಾ ಸಮಸ್ಯೆಗಳನ್ನು ಬದಿಗೊತ್ತಿ ಹೋರಾಟಕ್ಕೆ ಕಡ್ಡಾಯವಾಗಿ ಭಾಗಿಯಾಗಿ ವರ್ಗಾ ವಣೆ ವೇದಿಕೆಯ ಮುಖಂಡರಿಗೆ ಶಕ್ತಿತುಂಬಿ ನಿಮ್ಮ ನಿಮ್ಮ ಸಮಸ್ಯೆಗಳಿಗೆ ನೀವೆ ಪರಿಹಾರ ಕಂಡುಕೊ ಳ್ಳಲು ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು.
https://surveyheart.com/form/610d3b9d7953665bc3cfce56 ಈ ಸರ್ವೇ ಫಾರ್ಮ ಸಂಖ್ಯೆಯನ್ನು ನೋಡಿಕೊಂಡು ಹೋರಾಟ ದಿನಾಂಕವನ್ನು ನಿರ್ಧರಿಸಲಾಗುವುದು.
ಇದು ನಮ್ಮ ಕೊನೆಯ ಪ್ರಯತ್ನ.ಒಂದುವೇಳೆ ನೀವು ಹೋರಾಟಕ್ಕೆ ಬಾರದೇ ಹೋದರೆ ಮುಂದಿನ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಿರಿ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ
ವರ್ಗಾವಣೆಗಾಗಿ ಬೆಂಗಳೂರು ಚಲೋ ವೇದಿಕೆ
??????????