ಧಾರವಾಡ –
ಪಾಸಿಟಿವಿಟಿ ಕಡಿಮೆಯಾದ ಹಿನ್ನಲೆಯಲ್ಲಿ ಧಾರವಾ ಡ ಜಿಲ್ಲೆಯಲ್ಲಿ ನಾಳೆಯಿಂದ ಸ್ವಲ್ಪು ಮಟ್ಟಿಗೆ ರಿಲ್ಯಾ ಕ್ಸ್ ಸಿಗಲಿದೆ.ಇದರೊಂದಿಗೆ ಜಿಲ್ಲೆಯಲ್ಲಿ ಕೆಲವೊಂ ದಿಷ್ಟು ವಲಯಗಳಿಗೆ ಜಿಲ್ಲಾಧಿಕಾರಿ ನಿತೀಶ್ ಪಾಟೀ ಲ್ ಅವಕಾಶವನ್ನು ನೀಡಿದ್ದಾರೆ.ಇನ್ನೂ ನಾಳೆ ಲಾಕ್ ಡೌನ್ ಮುಕ್ತಾಯವಾಗುತ್ತಿರುವ ಹಿನ್ನಲೆಯಲ್ಲಿ ಧಾರ ವಾಡ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಹೊಸ ಮಾರ್ಗಸೂ ಚಿಗಳ ಆದೇಶವನ್ನು ಪ್ರಕಟ ಮಾಡಿದ್ದಾರೆ. ಪ್ರಮುಖ ವಾಗಿ ನಾಳೆಯಿಂದ ಜೂನ್ 21 ರವರೆಗೆ ಈ ಒಂದು ಹೊಸ ಮಾರ್ಗಸೂಚಿಗಳು ಅನ್ವಯವಾಗಲಿದ್ದು ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಯಾವುದಕ್ಕೆ ಅವಕಾ ಶ ನೀಡಿದ್ದಾರೆ ನೀಡಿಲ್ಲ ಕುರಿತಂತೆ ನೋಡೊದಾದರೆ

ಯಾವುದಕ್ಕೆ ಅವಕಾಶ
ಪ್ರತಿಶತ 50 ರಷ್ಟು ಕಾರ್ಮಿಕರನ್ನು ಬಳಕೆ ಮಾಡಿಕೊಂಡು ಕೈಗಾರಿಕೆಗಳಿಗೆ ಜಿಲ್ಲೆಯಲ್ಲಿ ಅವಕಾಶ
ಇನ್ನೂ ಪ್ರತಿಶತ 30 ರಷ್ಟು ಬಳಕೆ ಮಾಡಿಕೊಂಡು ಬಟ್ಟೆ ಕಾರ್ಖಾನೆ ತೆರೆಯಲು ಅವಕಾಶ
ಕಿರಾಣಿ,ತರಕಾರಿ,ಮೀನ ಮಾಂಸ.ಡೇರಿ,ಹಾಲಿನ ಕೇಂದ್ರಗಳು,ಪ್ರಾಣಿಗಳ ಆಹಾರದ ಅಂಗಡಿಗಳಿಗೆ ತೆರೆಯಲು ಅವಕಾಶ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ
ಬೀದಿ ಬದಿಯ ವ್ಯಾಪಾರಿಗಳಿಗೂ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ವ್ಯಾಪಾರ ಮಾಡಲು ಅವಕಾಶ
ಮಧ್ಯದ ಅಂಗಡಿ ಗಳಿಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಪಾರ್ಸಲ್ ಕೊಡಲು ಅವಕಾಶ ನೀಡಲಾಗಿದೆ
ಕಟ್ಟಡ ನಿರ್ಮಾಣದ ವಸ್ತುಗಳ ಮಾರಾಟದ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಸಿಮೆಂಟ್, ಕಬ್ಬಿಣ, ಹಾಗೇ ದುರಸ್ತಿ ಕಾರ್ಯಗಳ ಅಂಗಡಿಗಳಿಗೂ ಕೂಡಾ ಅನುಮತಿಯನ್ನು ನೀಡಲಾಗಿದೆ.
ವಾಯು ವಿಹಾರಕ್ಕೆ ಅನುಮತಿ ಬೆಳಿಗ್ಗೆ 5 ರಿಂದ 10 ಗಂಟೆಯ ವರೆಗೆ ಯಾವುದೇ ಗುಂಪು ಸೇರುವಂತಿಲ್ಲ ಯಾವುದೇ ಕಾರ್ಯಕ್ರಮವನ್ನು ಮಾಡುವಂತಿಲ್ಲ




ಟ್ಯಾಕ್ಸಿ.ರಿಕ್ಸಾ ಗಳಿಗೆ ಸಂಚರಿಸಲು ಅವಕಾಶ ಇಬ್ಬರು ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅನುಮತಿ
ಎಲ್ಲಾ ಸರ್ಕಾರಿ ಕಚೇರಿಗಳ ಆರಂಭಕ್ಕೆ ಅವಕಾಶ ಪ್ರತಿಶತ 50 ರಷ್ಟು ಮಾತ್ರ ಕಾರ್ಯವನ್ನು ಮಾಡಬೇಕು
ತರಬೇತಿ ಕಾರ್ಯಕ್ರಮಗಳಿಗೆ ಆರೋಗ್ಯ ಇಲಾಖೆಗೆ ಮಾತ್ರ ಅವಕಾಶ
ಆಪ್ಟೀಕಲ್ ಅಂಗಡಿ ಗಳ ಆರಂಭಕ್ಕೆ ಅವಕಾಶ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ತೆರೆಯಲು ಅವಕಾಶ
ಯಾವುದಕ್ಕೆ ಅವಕಾಶವಿಲ್ಲ
ಜೂನ್ 21 ರವರೆಗೆ ಜಿಲ್ಲೆಯಲ್ಲಿ ಯಾವುದೇ ಮದುವೆ ಸೇರಿದಂತೆ ಇನ್ನಿತರ ಕಾರ್ಯಕ್ರಮ ಮಾಡಲು ಅವಕಾಶವಿಲ್ಲ,
ಪ್ರತಿದಿನ ರಾತ್ರಿ 7 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ
ವಾರದ ಕರ್ಫ್ಯೂ ಶುಕ್ರವಾರಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ
ರಾತ್ರಿಯ ಕರ್ಫ್ಯೂವೇಳೆಯಲ್ಲಿ ಅಗತ್ಯವಾಗಿ ಸಂಚರಿಸಲು ಅವಕಾಶವನ್ನು ಕೆಲವೊಂದಿಷ್ಟು ವಲಯಗಳಿಗೆ ನೀಡಿದ್ದಾರೆ.