ಧಾರವಾಡ –
ಧಾರವಾಡದಲ್ಲಿ ಲಾಕ್ ಡೌನ್ ನಡುವೆ ಬಿಡುವಿಲ್ಲದೆ ಹತ್ತು ಹಲವಾರು ಕೆಲಸ ಕಾರ್ಯಗಳ ನಡುವೆ ತೊಡ ಗಿರುವ ಕಂದಾಯ ಇಲಾಖೆಯ ಅಧಿಕಾರಿಗಳು ಮೆಚ್ಚುವಂತಹ ಕೆಲಸವನ್ನು ಮಾಡಿದ್ದಾರೆ.ಹೌದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಮತ್ತು ತಹಶೀ ಲ್ದಾರ್ ಸಂತೋಷ ಬಿರಾದಾರ ಮಾರ್ಗದರ್ಶನದಲ್ಲಿ ಮತ್ತು ಹಿರಿಯ ಸಿಬ್ಬಂದಿ ಮಂಜುನಾಥ ಗೊಲಪ್ಪ ನವರ ಮತ್ತು ಧಾರವಾಡದ ತಹಶೀಲ್ದಾರ್ ಕಚೇರಿ ಯ ಅಧಿಕಾರಿ ಗಳು ಮತ್ತು ಸಿಬ್ಬಂದಿಗಳು ಮೆಚ್ಚು ವಂತಹ ಕೆಲಸ ಮಾಡಿದ್ದಾರೆ
ಧಾರವಾಡದ ಚಿಕ್ಕಮಲ್ಲಿಗವಾಡ ಬ್ರಿಡ್ಜ್ ಹತ್ತಿರ ರಸ್ತೆ ಪಕ್ಕದಲ್ಲಿ ಅಪರಿಚಿತ ವ್ಯಕ್ತಿ ಮೈಮೇಲೆ ಅರ್ಧ ಮರ್ಧ ಬಟ್ಟೆ ಇಲ್ಲದೆ ಕುಳಿತುಕೊಂಡಿದ್ದರು.ಇದನ್ನು ನೋಡಿದ ಕಂದಾಯ ಇಲಾಖೆಯ ಧಾರವಾಡ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳಾದ ವಿಟ್ಟಲ್ ಕೀಲಿ,ಬಸವರಾಜ ಕುಲಾವಿ, ಪ್ರವೀಣ ಕುಲಕರ್ಣಿ ಇವರೊಂದಿಗೆ 3 ಜನ ಗ್ರಾಮ ಲೆಕ್ಕಾಧಿಕಾರಿಗಳು ನಿರಾಶ್ರಿತರ ಕೇಂದ್ರಕ್ಕೆ ಶಿಪ್ಟ್ ಮಾಡಿದ್ದಾರೆ
ಕರ್ತವ್ಯದ ಮೇಲೆ ಹೋಗುವ ಸಮಯದಲ್ಲಿ ರಸ್ತೆ ಪಕ್ಕದಲ್ಲಿ ಹೀಗೆ ಕುಳಿತುಕೊಂಡಿದ್ದ ವ್ಯಕ್ತಿ ನೋಡಿ ಸುಮ್ಮನೆ ಹೋಗದೆ ಅವನನ್ನು ರಾಯಾಪೂರದ ಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಶಿಪ್ಟ್ ಮಾಡಿದ್ದಾರೆ
ಕೂಡಲೇ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಗೆದುಕೊಂಡು ಬಂದ ಇವರು ವ್ಯಕ್ತಿ ಯನ್ನು ನಿರಾಶ್ರಿತರ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಸೇರಿಸಿದ್ದಾರೆ
ಲಾಕ್ ಡೌನ್ ನ ಬಿಡುವಿಲ್ಲದ ಕೆಲಸ ಕಾರ್ಯದ ಮಧ್ಯೆ ಇವರು ವ್ಯಕ್ತಿಯನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿ ನೆಮ್ಮದಿಯ ಆಸರೆ ನೀಡಿ ನೆಮ್ಮದಿ ಬದುಕು ನೀಡಿದ್ದಾರೆ. ಒಟ್ಟಾರೆ ಧಾರವಾಡದ ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಮೆಚ್ಚು ವಂತಹ ಕೆಲಸವನ್ನು ಮಾಡಿ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ