ಧಾರವಾಡದ SDM ನಲ್ಲಿ ಮತ್ತೆ 77 ಪಾಸಿಟಿವ್ – 281 ಪಾಸಿಟಿವ್ 1822 ಜನರ ವರದಿ ನಿರೀಕ್ಷೆಯಲ್ಲಿ ಜಿಲ್ಲಾಡಳಿತ…..

Suddi Sante Desk

ಧಾರವಾಡ –

ಧಾರವಾಡದ ಎಸ್ ಡಿ ಎಂ ನಲ್ಲಿ ಮತ್ತೆ ಹೊಸದಾಗಿ 77 ಜನರಲ್ಲಿ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಇಲ್ಲಿನ ಎಸ್ ಡಿ ಎಂ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸೋಂಕು ಇಂದು ಮತ್ತೆ 77 ಜನರಲ್ಲಿ ದೃಢಪ ಟ್ಟಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ತಿಳಿಸಿ ದ್ದಾರೆ.

ಕಳೆದ ಎರಡು ದಿನಗಳಲ್ಲಿ 204 ಜನರಲ್ಲಿ ಹಾಗೂ ಇಂದು 77 ಪ್ರಕರಣಗಳು ಸೇರಿ ಒಟ್ಟು 281 ಕೋವಿಡ್ ಪ್ರಕರಣ ಗಳು ದೃಢಪಟ್ಟಿವೆ.ಎಲ್ಲರಿಗೂ ಚಿಕಿತ್ಸೆ,ಔಷಧೋಪಚಾರ ನಡೆಯುತ್ತಿದೆ.ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ ತಪಾಸಣೆಗೆ ಒಳಪಟ್ಟವರು ಪ್ರತ್ಯೇಕವಾಗಿ ಇರಲು ಸೂಚಿಸ ಲಾಗಿದೆ ಎಂದರು

ಇನ್ನೂ 1822 ಜನರ ತಪಾಸಣಾ ವರದಿಗಳು ಬರಬೇಕಾ ಗಿದೆ ಎಂದರು.ವರದಿಯಾಗಿರುವ 281 ಪ್ರಕರಣಗಳಲ್ಲಿ , ಕೇವಲ 6 ಜನರಲ್ಲಿ ಮಾತ್ರ ರೋಗದ ಸಾಮಾನ್ಯ ಲಕ್ಷಣ ಗಳಿವೆ ಖಾಯಿಲೆ ತೀವ್ರತರವಾಗಿಲ್ಲ ಉಳಿದ 275 ಜನರಲ್ಲಿ ರೋಗದ ಲಕ್ಷಣಗಳು ಇಲ್ಲ ಯಾವುದೇ ಸಾವು ಸಂಭವಿ ಸಿಲ್ಲವೆಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.