This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ಧಾರವಾಡದಲ್ಲಿ BEO ಗೆ ಮನವಿ ನೀಡಿದ ಶಿಕ್ಷಕರು ವಿವಿಧ ಬೇಡಿಕೆ ಈಡೇರಿಸಲು ಒತ್ತಾಯ…..

WhatsApp Group Join Now
Telegram Group Join Now

ಧಾರವಾಡ –

ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ನಿಯೋಗವು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕನವರ ನ್ನು ಭೇಟಿ ಮಾಡಿ ಶಿಕ್ಷಕರ ಬೇಡಿಕೆಗಳ ಮನವಿ ಸಲ್ಲಿಸಿ ಸುದೀರ್ಘವಾಗಿ ಚರ್ಚಿಸಲಾಯಿತು.ಮಕ್ಕಳ ಪರ್ಯಾಯ ಶಿಕ್ಷಣ, ಶಿಕ್ಷಕರ ಜ್ಞಾನ ಬಲವರ್ಧನೆ ಪೂರಕವಾಗಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಅಭಿನಂದಿಸಲಾಯಿತು.

ಶಿಕ್ಷಕರ ಬೇಡಿಕೆಗಳ ಕುರಿತು ಚರ್ಚೆ

2020 ಮತ್ತು 2021ರ ಕೋವಿಡ್ ಸಂದರ್ಭದಲ್ಲಿ Cheakpost duty, Hospital visit duty, Data entry, Tracing work,BLO survey ಕಾರ್ಯಗಳನ್ನು ಮಾಡಿರುವ ಶಿಕ್ಷಕರಿಗೆ ಸರ್ಕಾರದ ಆದೇಶದಂತೆ ನಿಯಮಾನುಸಾರ ಗಳಿಕೆ ರಜೆ ಮಂಜೂರು ಮಾಡುವುದು.ಈ ವರ್ಷದ ಮಾಹಿತಿ ಮೇಲಾಧಿಕಾರಿಗಳಿಂದ ಬಂದಿದ್ದು ಉಳಿದಂತೆ ಸಿ ಆರ್ ಸಿ ವಾರು ಅಗತ್ಯ ಮಾಹಿತಿ ಸಂಗ್ರಹಿಸಿ ದೃಢೀಕರಣ ಪಡೆದು ಗಳಿಕೆ ರಜೆ ಮಂಜೂರು ಮಾಡುತ್ತೇವೆ ಎಂದು ತಿಳಿಸಿದರು.

ಪ್ರತಿ ತಿಂಗಳು ಶಿಕ್ಷಕರ ವೇತನ ಮಾಹಿತಿಯನ್ನು ಎಸ್ಎಂಎಸ್ ಮೂಲಕ ತಿಳಿಸುವುದು.ಮಾನ್ಯರು ಈ ಕಾರ್ಯ ಪ್ರಗತಿಯಲ್ಲಿದ್ದು ಮುಂದಿನ ತಿಂಗಳಿ ನಿಂದ ವೇತನ ಮಾಹಿತಿ ಎಸ್ಎಂಎಸ್ ಮೂಲಕ ಬರುತ್ತದೆ ಎಂದು ತಿಳಿಸಿದರು.

ಶಿಕ್ಷಕರಿಗೆ ತಮ್ಮ ಸೇವಾ ಪುಸ್ತಕ ಪರಿಶೀಲಿಸಲು ಗುರು ಸ್ಪಂದನ ಕಾರ್ಯಕ್ರಮ ಏರ್ಪಡಿಸುವುದು.
ಮಾನ್ಯರು ಕೋವಿಡ್ ನಿಯಮಗಳನ್ನು ಅನುಸರಿಸಿ ಮುಂದಿನ ದಿನಗಳಲ್ಲಿ ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಪ್ರಧಾನ ಗುರುಗಳ ಪ್ರಭಾರಿ ಭತ್ಯೆ, ವೇತನ ಬಡ್ತಿ ಕಾಲಮಿತಿ ಬಡ್ತಿ ,ವೈದ್ಯಕೀಯ ವೆಚ್ಚ ಮರುಪಾವತಿ ಸೇರಿದಂತೆ ಶಿಕ್ಷಕರ ಎಲ್ಲಾ ರೀತಿಯ ಅರಿಯರ್ಸ್ ಸಂದಾಯವಾಗುವಂತೆ ಕ್ರಮವಹಿಸುವುದು.ನಮ್ಮ ತಾಲೂಕಿನಲ್ಲಿ ಶಿಕ್ಷಕರ ಸಂಖ್ಯೆ ಗರಿಷ್ಠ ವಾಗಿದ್ದು ಇನ್ನು ಇಬ್ಬರು ಸಿಬ್ಬಂದಿಗಳ ಅವಶ್ಯಕತೆ ಇದೆ. ವರ್ಕ್ ಲೋಡ್ ಜಾಸ್ತಿ ಇದ್ದು ಬಾಕಿ ಇರುವ ಅರಿಯರ್ಸ್ ಮಾಡಲಾಗುವುದು ಎಂದು ತಿಳಿಸಿದರು

ಬೇಸಿಗೆ ರಜೆ ಅನುಭವಿಸದೆ ಕಾರ್ಯನಿರ್ವಹಿಸಿದ ತಾಲೂಕಿನ ಎಲ್ಲ CRP, BRP, BIERT ಸಂಪನ್ಮೂಲ ವ್ಯಕ್ತಿಗಳಿಗೆ ನಿಯಮಾನುಸಾರ ಗಳಿಕೆ ರಜೆ ಮಂಜೂರು ಮಾಡುವುದು.ಸಂಪನ್ಮೂಲ ವ್ಯಕ್ತಿಗಳು ಬೇಸಿಗೆ ರಜೆಯಲ್ಲಿ ಮಾಡಿರುವ ಕಾರ್ಯನಿರ್ವಹಣೆ ಪರಿಶೀಲಿಸಿ ಗಳಿಕೆ ರಜೆ ಮಂಜೂರು ಮಾಡುತ್ತೇವೆ ಎಂದು ತಿಳಿಸಿದರು.

ಶಾಲೆಗಳಿಗೆ ಅವಶ್ಯಕ ಮಕ್ಕಳ ಹಾಜರಿ ವರ್ಗಾವಣೆ ಪತ್ರ ಪ್ರವೇಶ ಅರ್ಜಿ ಮುಂತಾದವುಗಳನ್ನು ಪೂರೈಸುವುದು.ಮುದ್ರಣ ಕಾರ್ಯ ನಡೆದಿದ್ದು, ನಮಗೆ ಲಭ್ಯವಾದ ತಕ್ಷಣ ಶಾಲೆಗೆ ಪೂರೈಸುತ್ತೇವೆ ಎಂದು ತಿಳಿಸಿದರು.

ಕಳೆದ ಎರಡು ವರ್ಷಗಳಲ್ಲಿ ಬಡ್ತಿ ಹೊಂದಿದ ಮುಖ್ಯ ಶಿಕ್ಷಕರಿಗೆ, ಪ್ರಭಾರಿ ಮುಖ್ಯ ಶಿಕ್ಷಕರಿಗೆ, ನೂತನCRP, BRP ಅವರಿಗೆ ಆಡಳಿತಾತ್ಮಕ ತರಬೇತಿ ನೀಡು ವುದು.ಇದು ಬಹಳ ಅವಶ್ಯವಿದ್ದು ಮುಖ್ಯವಾಗಿ ಕ್ಯಾಶ್ ಬುಕ್ ಲೆಡ್ಜರ್, ಪ್ರವೇಶ ಪತ್ರ ವರ್ಗಾವಣೆ ಪತ್ರ, SATS, ಪ್ರಮುಖ ದಾಖಲೆಗಳು ಕುರಿತಂತೆ ಮುಖಾಮುಖಿ ತರಬೇತಿ ನೀಡಲು ಯೋಜನೆ ತಯಾರಿಸುತ್ತೇವೆ ಎಂದು ತಿಳಿಸಿದರು.

ಶಿಕ್ಷಕರ ಗಳಿಕೆ ರಜೆ ಗಳನ್ನು HRMS ನಲ್ಲಿ update ಮಾಡುವುದು.ಈ ಕುರಿತಂತೆ ನಾವು ಈಗಾಗಲೇ ಚರ್ಚಿಸಿದ್ದು ಅಗತ್ಯ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ಸಮಾರಂ ಭದಲ್ಲಿ ಸನ್ಮಾನ ಕಾರ್ಯವನ್ನು ಕೈಗೊಳ್ಳುವುದು. ಮಾನ್ಯ ಸಾಹೇಬರು ಶಿಕ್ಷಕರು ನಿವೃತ್ತಿಯಾದ ದಿನದಂದೇ ಗೌರವಿಸುವ ಕಾರ್ಯವನ್ನು ಮಾಡು ತ್ತಿದ್ದು ಅವರಿಗೆ ಅಭಿನಂದಿಸ ಲಾಯಿತು.

ಸರ್ಕಾರದ ಆದೇಶದಂತೆ ಅರ್ಹ ಶಿಕ್ಷಕಿಯರಿಗೆ ಶಿಶುಪಾಲನಾ ರಜೆಯನ್ನು ಮಂಜೂರು ಮಾಡು ವುದು.ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.ಮೇಲ್ಕಂಡ ಎಲ್ಲ ಸಮಸ್ಯೆಗಳನ್ನು ಸುದೀರ್ಘವಾಗಿ ಚರ್ಚಿಸಲಾಯಿತು ಪ್ರತಿಯೊಂದು ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಈ ಸಂದರ್ಭ ದಲ್ಲಿ ಕಚೇರಿಯ ಅಧೀಕ್ಷಕರಾದ, ವೀರೇಶ್ ಕಲಬುರ್ಗಿ ಹಾಜರಿ ದ್ದರು.ಶಿಕ್ಷಕರ ಸಂಘದ ನಿಯೋಗದಲ್ಲಿ ರಾಜ್ಯ ನಾಯಕರಾದ ಗುರು ತಿಗಡಿ ಶಂಕರ್ ಘಟ್ಟಿ, ಶ್ರೀಮತಿ ಶಾರದಾ ಶಿರಕೋಳ,

ಧಾರವಾಡ ತಾಲೂಕ ಪದಾಧಿಕಾರಿಗಳಾದ ಅಲ್ಲಾಭಕ್ಷ ನದಾಫ್,ಚಂದ್ರಶೇಖರ ತಿಗಡಿ, ಚಿದಾನಂದ ಹೂಲಿ, ಎಂ ಜಿ ನಿಂಬಕ್ಕ ನವರ, ಎಚ್ಎಫ್ ಜಿಲ್ಲೆ ನವರ್, ಎಂ ಜಿ ಹಿರೇಮಠ, ಎನ್ ಬಿ ತೋರಣಗಟ್ಟಿ, ಶಿಕ್ಷಕರಾದ ಆತ್ಮಾನಂದ ಕೆಂಪೂರ ಹಾಜರಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk