ಧಾರವಾಡ –
ಮನೆಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮವಾಗಿ ವ್ಯಕ್ತಿ ಯೊಬ್ಬನು ಸಜೀವವಾಗಿ ದಹನವಾದ ಘಟನೆ ಧಾರವಾಡ ದಲ್ಲಿ ನಡೆದಿದೆ. ಹೌದು ಧಾರವಾಡ ನಗರದ ನಗರೇಶ್ವರ ದೇವಸ್ಥಾನ ಬಳಿ ಈ ಒಂದು ಘಟನೆ ನಡೆದಿದೆ.ವಿನಾಯಕ ಚಿನಿವಾಲರ(೩೬) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ.ಕುಡಿದ ಅಮಲಿನಲ್ಲಿ ಮನೆಯಲ್ಲಿ ಮಲಗಿದ್ದನು ವಿನಾಯಕ.
ಈ ವೇಳೆ ಬೆಂಕಿ ಹೊತ್ತಿ ಉರಿದ ಕಾರಣದಿಂದಾಗಿ ಸಜೀವ ದಹನವಾಗಿದ್ದಾನೆ.ಮನೆಯಲ್ಲಿಯೇ ಮಲಗಿಕೊಂಡ ಸ್ಥಳ ದಲ್ಲಿಯೇ ಸುಟ್ಟು ಕರಕಲಾಗಿದ್ದು ಇನ್ನೂ ಸುದ್ದಿ ತಿಳಿದ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಭೇಟಿ ನೀಡಿ ಪರಿಶೀ ಲನೆ ಮಾಡಿದ್ದಾರೆ ಪೋಲೀಸರು.ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು ಸಧ್ಯ ದೂರನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.