ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ 3 ರಲ್ಲಿ ಬಿಜೆಪಿ ಪಕ್ಷದ ಚುನಾವಣೆಯ ಪ್ರಚಾರ ಜೋರಾಗಿದೆ.ವಾರ್ಡ್ 3 ಬಿಜೆಪಿ ಅಭ್ಯರ್ಥಿ ಈರೇಶ ಅಂಚಟಗೇರಿ ಅಬ್ಬರದ ಪ್ರಚಾರವನ್ನು ಮಾಡತಾ ಇದ್ದಾರೆ.
ಹೌದು ಕಳೆದ ಒಂದು ವಾರದಿಂದ ವಾರ್ಡ್ ನಲ್ಲಿ ಬಿಡುವಿಲ್ಲದೆ ಪ್ರಚಾರವನ್ನು ಮಾಡತಾ ಮತಯಾ ಚನೆ ಮಾಡತಾ ಇದ್ದಾರೆ.ಇನ್ನೂ ಇಂದು ಗುಲಗಂಜಿ ಕೊಪ್ಪ, ಜನತಾ ಕಾಲೊನಿ ಮತ್ತು ಸೈದಾಪುರ ಮುಖ್ಯ ರಸ್ತೆಯಲ್ಲಿ ಈರೇಶ ಅಂಚಟಗೇರಿ ಅವರ ಪರವಾಗಿ ಮತಯಾಚನೆ ಮಾಡಿದರು
ಬಿಜೆಪಿ ಮುಖಂಡರಾದ ಅಶೋಕ ದೇಸಾಯಿ ಅವರ ನೇತೃತ್ವದಲ್ಲಿ ಪಾದಯಾತ್ರೆಯನ್ನು ಹಮ್ಮಿ ಕೊಳ್ಳಲಾ ಯಿತು. ಈ ಸಂದರ್ಭದಲ್ಲಿ ಅಭ್ಯರ್ಥಿಯಾದ ಈರೇಶ ಅಂಚಟಗೇರಿ,ಅಶೋಕ ಶೆಟ್ಟರ,ರಾಜೇಶ್ವರಿ ಅಳಗ ವಾಡಿ ,ಶೋಭಾ ಶಿಂಧೆ, ಹರೀಶ ಮಣಕವಾಡ, ಈರಪ್ಪ ಗಂಭೀರ, ಮತ್ತು ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದು ಮತಯಾಚನೆ ಮಾಡಿದರು