ಧಾರವಾಡ –
ಬೈಕ್ ಗೆ ಪೆಟ್ರೋಲ್ ಹಾಕುವ ಸಂದರ್ಭದಲ್ಲಿ ಏಕಾಏಕಿ ಯಾಗಿ ಬೈಕ್ಗೆ ಬೆಂಕಿ ತಗುಲಿದ ಘಟನೆ ಧಾರವಾಡ ದಲ್ಲಿ ನಡೆದಿದೆ. ಧಾರವಾಡ ಮಮ್ಮಿಗಟ್ಟಿ ಗ್ರಾಮದ ಬಳಿಯ ಬಂಕ್ ನಲ್ಲಿ ಈ ಒಂದು ಘಟನೆ ನಡೆದಿದೆ
ಹೌದು ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಬಳಿ ನಡೆದ ಈ ಒಂದು ಘಟನೆ ಯಲ್ಲಿ ಬೈಕ್ ಗೆ ಪೆಟ್ರೋಲ್ ಹಾಕುವಾಗ ಏಕಾಏಕಿ ಯಾಗಿ ಬೆಂಕಿ ಹತ್ತಿಕೊಂಡಿತು ನಂತರ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾ ಯಿತು
ಮುಮ್ಮಿಗಟ್ಟಿ ಗ್ರಾಮದ ಬಳಿ ಇರುವ ಪೆಟ್ರೋಲ್ ಬಂಕ್ಗೆ ಬೈಕ್ ಸವಾರನೋರ್ವ ಪೆಟ್ರೋಲ್ ಹಾಕಿಸಲು ಬಂದಿದ್ದನು ಪೆಟ್ರೋಲ್ ಹಾಕಿಸುವ ಸಂದರ್ಭದಲ್ಲಿ ಬೈಕ್ಗೆ ಬೆಂಕಿ ತಗುಲಿದೆ.ಬೈಕ್ ಮೇಲೆ ಕುಳಿತುಕೊಂಡಿದ್ದ ಸವಾರ ಬೈಕ್ ಬಿಟ್ಟು ಮುಂದೆ ಓಡಿ ಹೋಗಿದ್ದಾನೆ.
ಬೆಂಕಿ ಹತ್ತುತ್ತಿದ್ದಂತೆ ಪೆಟ್ರೋಲ್ ಬಂಕ್ ಸಿಬ್ಬಂದಿ ಎಚ್ಚೆತ್ತು ಕೊಂಡು ಕೂಡಲೇ ಬೆಂಕಿ ನಂದಿಸಿ ಮುಂದೆ ಸಂಭವಿಸಬ ಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.ಈ ಎಲ್ಲ ದೃಶ್ಯಾ ವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಒಟ್ಟಾರೆ ಬಂಕ್ ನ ಸಿಬ್ಬಂದಿ ಗಳ ಸಮಯ ಪ್ರಜ್ಞೆ ಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಅನಾಹುತವೊಂದು ತಪ್ಪಿದೆ.
ವರದಿ – ಗೋಪ್ಯಾ ಉಳ್ಳಾಗಡ್ಡಿ ಜೊತೆ ಶ್ರೇಯಾನ್ ಸರ್ವಿ ಸುದ್ದಿ ಸಂತೆ ಡೆಸ್ಕ್ ಬೆಂಗಳೂರು