ಕಲಘಟಗಿ –
ಧಾರವಾಡದ ಕಲಘಟಗಿಯಲ್ಲೂ ಆನೆಗಳ ಹಿಂಡು ಪ್ರತ್ಯಕ್ಷವಾಗಿವೆ.ತಾಲ್ಲೂಕಿನ ಲಿಂಗನಕೊಪ್ಪ ಗ್ರಾಮದ ರೈತರ ಜಮೀನಿನಲ್ಲಿ ಶನಿವಾರ ಸಂಜೆ ಆನೆಗಳ ಹಿಂಡು ಪ್ರತ್ಯಕ್ಷವಾಗಿದ್ದು ಅರಣ್ಯ ಸಿಬ್ಬಂದಿಗಳು ಕಾಡಿಗೆ ಅಟ್ಟಲು ತೀವ್ರ ಕಾರ್ಯಚರಣೆ ಮಾಡುತ್ತಿದ್ದಾರೆ.
ಬೇಸಿಗೆ ಕಾಲ ಇರುವದರಿಂದ ಕಾಡಿನಲ್ಲಿ ಆಹಾರದ ಕೊರತೆಯಿಂದ ನಾಡಿನತ್ತ ಆಹಾರ ಆರಿಸಿ ಮುಖ ಮಾಡುತ್ತಿವೆ ಎನ್ನಲಾಗಿದೆ.
ಈಗಾಗಲೇ ಆನೆಗಳ ಹಿಂಡನ್ನು ಕಾಡಿಗೆ ಓಡಿಸಲು ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ಮಾಡುತ್ತಿ ದ್ದಾರೆ.
ಆನೆಗಳು ಇರುವ ಸುತ್ತ ಮುತ್ತಲಿನ ಪ್ರದೇಶದ ಜಮೀನಿಗೆ ರಾತ್ರಿ ವೇಳೆ ರೈತರು ಯಾರು ಬರಬಾರ ದು ಎಚ್ಚರದಿಂದ ಇರಲು ತಾಲ್ಲೂಕ ವಲಯ ಅರಣ್ಯಧಿಕಾರಿ ಶ್ರೀಕಾಂತ ಪಾಟೀಲ ಸಾರ್ವಜನಿ ಕರಲ್ಲಿ ಮನವಿ ಮಾಡಿದ್ದಾರೆ