ಧಾರವಾಡ –
ಕಾರು ಮತ್ತು ಬೈಕ್ ಅಪಘಾತಕ್ಕಿತಾಡ ಘಟನೆ ಧಾರವಾಡ ದಲ್ಲಿ ನಡೆದಿದೆ.ಧಾರವಾಡದ ನುಗ್ಗಿಕೇರಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಈ ಒಂದು ಅಪಘಾತ ನಡೆದಿದೆ

ರಸ್ತೆ ತಿರುವಿನಲ್ಲಿ ವೇಗವಾಗಿ ಬಂದ ಎರಡು ವಾಹನ ಗಳು ನಿಯಂತ್ರಣ ತಪ್ಪಿ ಈ ಒಂದು ಅಪಘಾತ ಸಂಭವಿಸಿದೆ

ಅಪಘಾತ ದಲ್ಲಿ ಬೈಕ್ ನ ಮುಂದಿನ ಭಾಗ ಸಂಪೂರ್ಣವಾಗಿ ಜಖಂ ಆಗಿದ್ದು ಬೈಕ್ ನಲ್ಲಿದ್ದ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ

ಇನ್ನೂ ಅಪಘಾತದ ಸುದ್ದಿ ತಿಳಿದ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

ಗಾಯಗೊಂಡ ಬೈಕ್ ಸವಾರರು ಎಲ್ಲಿಯವರು ಅವರ ಕುರಿತು ಧಾರವಾಡ ಗ್ರಾಮೀಣ ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.