ಧಾರವಾಡ –
ಧಾರವಾಡದ ಲೋಕೋಪಯೋಗಿ ಇಲಾಖೆ ಡಿವಿಜನ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ.ಚೌಡಣ್ಣವರ. ನವಲಗುಂದ ಎಇಇ ಸಿದ್ದಾಪುರ ಅವರ ಮೇಲೆ ಭ್ರಷ್ಟಾ ಚಾರ ಚಾರದ ಆರೋಪ ಕೇಳಿ ಬಂದಿದೆ.ಹೌದು ಈ ಇಬ್ಬರೂ ಅಧಿಕಾರಿಗಳ ವಿರುದ್ಧ ಇದೀಗ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇದೀಗ ಪಿಡಬ್ಲುಡಿ ಕಚೇರಿ ಎದುರೇ ಧರಣಿ ಕುಳಿತಿದ್ದಾರೆ.

ಈ ಅಧಿಕಾರಿಗಳು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದು ಅವರ ಮೇಲೆ ತನಿಖಾ ತಂಡ ರಚಿಸುವವರೆಗೂ ಧರಣಿ ನಿಲ್ಲುವುದಿಲ್ಲ ಎಂದು ಕರವೇ ಸ್ಪಷ್ಟಪಡಿಸಿದೆ.ಸರ್ಕಾರದ ಅನುದಾನ ದುರ್ಬಳಕೆ,ಗುತ್ತಿಗೆದಾರರಿಂದ ಲಕ್ಷಗಟ್ಟಲೇ ಕಮೀಷನ್ ಪಡೆಯುತ್ತಿರುವ ಈ ಅಧಿಕಾರಿಗಳು,ಕೋಟಿ ಕೋಟಿಗಟ್ಟಲೇ ಭ್ರಷ್ಟಾಚಾರವೆಸಗಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ ಎಂಬ ಆರೋಪವನ್ನು ಮಾಡಿದ್ದಾರೆ.
ರಸ್ತೆಗಳ ನಿರ್ಮಾಣ,ದುರಸ್ತಿ ಕೆಲಸಗಳಲ್ಲಿ ಅಧಿಕಾರಿಗಳು ಸರ್ಕಾರದ ಹಣವನ್ನು ತಿಂದು ತೇಗಿದ್ದಾರೆ ಸರ್ಕಾರ ಕೂಡಲೇ ಇವರನ್ನು ಅಮಾನತ್ತು ಮಾಡಿ ಇವರ ಮೇಲೆ ವಿಚಾರಣಾ ತಂಡವನ್ನು ನೇಮಿಸಬೇಕು ಎಂದು ಕರವೇ ಆಗ್ರಹಿಸಿದೆ.