ಧಾರವಾಡ –
ಕಳೆದ 20 ವರ್ಷಗಳಿಂದ ಅನುದಾನರಹಿತ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು ತಿಂಗಳಿಗೆ ಕೇವಲ 6 ಸಾವಿರ ವೇತನ ಕೊಡುತ್ತಿದ್ದಾರೆ. ಇದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಶಿಕ್ಷಕನೊರ್ವ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಅವರೆದುರು ಗಳಗಳನೇ ಅತ್ತಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದಿನಿಂದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಆರಂಭವಾಗಿದೆ.ಈ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಹಿರೇಕೆರೂರು ತಾಲೂಕಿ ಹಂಸಭಾವಿ ಗ್ರಾಮದ ದುರ್ಗದ ಅನುದಾನರಹಿತ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಮಕ್ಬುಲ್ ಅಹ್ಮದ್ ಜಮಖಂಡಿ ಶಿಕ್ಷಕನೇ ಗಳಗಳನೇ ಅತ್ತು ತನ್ನ ಅಳಲು ತೋಡಿಕೊಂಡಿದ್ದಾರೆ.
20 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ ಕೇವಲ 6 ಸಾವಿರ ಮಾತ್ರ ವೇತನ ಕೊಡುತ್ತಾರೆ. ಮಕ್ಕಳು ಹತ್ತು ರೂಪಾಯಿ ಕೇಳಿದರೂ ಕೊಡಲು ನನ್ನ ಬಳಿ ಹಣ ಇರೋದಿಲ್ಲ ಎಂದು ಮಕ್ಬುಲ್ ಮಾಧ್ಯಮದ ಎದುರೂ ಗಳಗಳನೇ ಅತ್ತ ಪ್ರಸಂಗ ನಡೆಯಿತು. ಇನ್ನು ಈ ಶಿಕ್ಷಕನ ಸಮಸ್ಯೆ ಆಲಿಸಿದ ಮಾಜಿ ಶಾಸಕ ಕೋನರಡ್ಡಿ, ಸರ್ಕಾರ ಶಿಕ್ಷಕರ ಕಣ್ಣಲ್ಲಿ ನೀರು ಹಾಕಿಸುವ ಕೆಲಸ ಮಾಡಬಾರದು ಎಂದರು.
ಇನ್ನೂ ಇತ್ತ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ಬಸವರಾಜ ಹೊರಟ್ಟಿ ಇಂದಿನಿಂದ ಉಪವಾಸ ಸತ್ಯಗ್ರಹ ಆರಂಭಗೊಂಡಿದೆ. ಹೊರಟ್ಟಿ ಯವರ ನೇತ್ರತ್ವದಲ್ಲಿ ಆರಂಭಗೊಂಡ ಉಪವಾಸ ಸತ್ಯಾಗ್ರಹದಲ್ಲಿ ಅನುದಾನರಹಿತ ಶಾಲೆಗಳ ಶಿಕ್ಷಕರು ಶಾಲೆಗಳ ಮುಖ್ಯಸ್ಥರು ಸೇರಿದಂತೆ ಹಲವರು ಪಾಲ್ಗೊಂಡಿದ್ದು.ಇವೆಲ್ಲದರ ನಡುವೆ ಬಸವರಾಜ ಹೊರಟ್ಟಿ ರಾಜ್ಯ ಸರ್ಕಾರಕ್ಕೇ ಬೇಡಿಕೆಗಳ ಈಡೇರಿಕೆಗೆ 15 ದಿನಗಳ ಗಡುವನ್ನು ನೀಡಿದ್ದು ಇವೆಲ್ಲದರ ನಡುವೆ ಈ ಹಿಂದೆ ಹೊರಟ್ಟಿಯವರು ದೊಡ್ಡ ಪ್ರಮಾಣದಲ್ಲಿ ಹೋರಾಟವನ್ನು ಮಾಡಿದ್ದರು. ಈಗ ಸರ್ಕಾರ ಸ್ಪಂದಿಸದಿದ್ದರೇ ಮತ್ತೇ ಈ ಹಿಂದೆ ನಡೆದ ರೀತಿಯಲ್ಲಿಯೇ ಹೋರಾಟವಾಗುತ್ತದೆ.