ಹುಬ್ಬಳ್ಳಿ ಧಾರವಾಡ –
ನಾಳೆ ವ್ಯಾಲೇಂಟೈನ್ ದಿನಾಚರಣೆ.ಆಚರಣೆ ಹಿನ್ನೆಲೆ ಹುಬ್ಬಳ್ಳಿ-ಧಾರವಾಡದ ಪ್ರೇಮಿಗಳೆ ಎಚ್ಚರ.ನೀವು ಜೋಡಿಯಾಗಿ ಕಂಡ್ರೆ ಬುದ್ಧಿ ಕಲಿಸೋಕೆ ಬರತಾ ಇದಾರೆ ರಾಮ ಸೇನಾ ಹುಬ್ಬಳ್ಳಿ ಸಂಘಟನೆಯ ಕಾರ್ಯಕರ್ತರು.

ಪ್ರೇಮಿಗಳ ಮೇಲೆ ಕಣ್ಗಾವಲು ಇಡಲು ಸಜ್ಜಾಗಿದ್ದಾರೆ ಶ್ರೀರಾಮ ಸೇನೆ ಪಡೆಯ ಮುಖಂಡರು ಕಾರ್ಯಕರ್ತರು.ಇದಕ್ಕಾಗಿ ಶ್ರೀರಾಮ ಸೇನೆಯಿಂದ 40 ಯುವಕರ ಪಡೆ ಸಜ್ಜಾಗಿದೆಯಂತೆ.

ಧಾರವಾಡ ಜಿಲ್ಲೆಯಲ್ಲಿ ನಾಳೆ ಈ ತಂಡವು ಸಂಚರಿಸಲಿದೆಯಂತೆ.ಪಾರ್ಕ್, ಹೋಟೆಲ್, ಶಾಪಿಂಗ್ ಮಾಲ್.ಗಳ ಮೇಲೆ ನಿಗಾ ವಹಿಸುವ ಈ ಒಂದು ಟೀಮ್ ಗಳು ಪ್ರೇಮಿಗಳು ಕಂಡಲ್ಲಿ ಅವರಿಗೆ ಬುದ್ಧಿವಾದ ಹೇಳಲು ನಿರ್ಧಾರವನ್ನು ಮಾಡಿದ್ದಾರೆ.

ಧಾರವಾಡ-ಹುಬ್ಬಳ್ಳಿ ಅವಳಿ ನಗರದಲ್ಲಿ ಇಡೀ ದಿನ ಈ ನಾಲ್ವತ್ತು ಜನರ ತಂಡ ಸಂಚರಿಸಲಿದೆ.ಈ ಕುರಿತು ಪತ್ರಿಕಾ ಪ್ರಕಟಣೆಯ ಮೂಲಕ ಹೇಳಿಕೆ ನೀಡಿದ್ದಾರೆ.