ಹುಬ್ಬಳ್ಳಿ –
ಇತ್ತೀಚಿಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ನಡೆದ ಕುರಿಗಾಹಿ ಮಹಿಳೆಯ ಹತ್ಯೆಯನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನಾ ಸಂಘಟನೆ ಯಿಂದ ಪ್ರತಿಭಟನೆ ಮಾಡಲಾಯಿತು

ಅಲೆಮಾರಿ,ಕುರಿ ಕಾಯುವ ಸಹೋದರಿಯನ್ನು ಅತ್ಯಾ ಚಾರ ಮಾಡಿ ಕೊಲೆ ಮಾಡಿದವರನ್ನು ಈ ಕೂಡಲೇ ಗಲ್ಲಿಗೇರಿಸಬೇಕು ಇನ್ನಿತರ ಆರೋಪಿಗಳನ್ನು ಬಂಧಿಸಿ ಶಿಕ್ಷೆ ನೀಡುವಂತೆ ಒತ್ತಾಯ ವನ್ನು ಮಾಡಲಾಯಿತು ಹಾಗೇ ಮೃತ ಸಹೋದರಿ ಕುಟುಂಬಕ್ಕೆ 25 ಲಕ್ಷ ಪರಿಹಾರ ಆಕೆಯ 3 ಮಕ್ಕಳ ಶಿಕ್ಷಣ ಸರ್ಕಾರ ವಹಿಸಿಕೊಳ್ಳುವಂತೆ ಆಗ್ರಹ ಮಾಡಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು ಗಂಗಾಧರ ಕುಲಕರ್ಣಿ ಇವರೊಂದಿಗೆ ಹಲವರು ಈ ಒಂದು ಸಮಯದಲ್ಲಿ ಉಪಸ್ಥಿತರಿದ್ದರು