ಹುಬ್ಬಳ್ಳಿ –
ಲಾಕ್ ಡೌನ್ ಸಮಯದಲ್ಲಿ ಬಾಡಿಗೆಗಾರರಿಗೆ ಮನೆಯ ಮಾಲೀಕರು ಯಾವುದೇ ತೊಂದರೆ ಕಿರುಕುಳು ಕೊಡದಂತೆ ರಾಜ್ಯ ಸರ್ಕಾರ ತಾಕೀತು ಮಾಡಿದೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸರ್ಕಾರ ಆದೇಶ ಮಾಡಿದ್ದರೂ ಕೂಡಾ ಮನೆಯ ಮಾಲೀಕರೊಬ್ಬರು ಬಾಡಿಗೆದಾರರಿಗೆ ತೊಂದರೆ ನೀಡುತ್ತಾದ್ದರಂತೆ.ಹೌದು ನಗರದ ದೇಶಪಾಂಡೆ ನಗರದಲ್ಲಿ ಈ ಒಂದು ಘಟನೆ ಬೆಳಕಿಗೆ ಬಂದಿದೆ.
ಮಹಾದೇವ ಜರತಾರಘರ ಎಂಬುವರ ಮನೆಯಲ್ಲಿ ಕುಟುಂಬವೊಂದು ಬಾಡಿಗೆ ಇದೆ. ಕಳೆದ ನಾಲ್ಕು ವರುಷದಿಂದ ಇವರು ಇವರ ಮನೆಯಲ್ಲಿ ಬಾಡಿಗೆ ಇದ್ದಾರೆ. ಎಲ್ಲವೂ ಸರಿಯಾಗಿದ್ದ ಸಮಯದಲ್ಲಿ ಸಧ್ಯ ಇವರಿಗೆ ಕುಡಿಯಲು ಮತ್ತು ಬಳಸಲು ನೀರನ್ನು ಕೊಡುತ್ತಿಲ್ಲವಂತೆ. ಮನೆಯ ಮಾಲೀಕರು ಬಾಡಿಗೆ ದಾರರಿಗೆ ಸರಬರಾಜು ಆಗುತ್ತಿದ್ದ ನೀರನ್ನು ಬಂದ್ ಮಾಡಿದ್ದಾರಂತೆ.
ಕುಡಿಯುವ ನೀರಿಗಾಗಿ ಪ್ರತಿ ತಿಂಗಳು ಪ್ರತ್ಯೇಕವಾಗಿ 200 ನೂರು ರೂಪಾಯಿ ನೀಡಿದರು ಕೂಡಾ ಕಳೆದ ಎರಡು ದಿನಗಳಿಂದ ಬಾಡಿಗೆದಾರರಿಗೆ ಕುಡಿಯಲು ನೀರನ್ನು ನೀಡುತ್ತಿಲ್ಲವಂತೆ. ಅಲ್ಲದೇ ಮನೆಯನ್ನು ಖಾಲಿ ಮಾಡುವಂತೆ ತಾಕೀತು ಮಾಡಿದ್ದಾರಂತೆ ಇದ ರಿಂದ ಬಾಡಿಗೆ ದಾರರು ಉಪನಗರ ಪೊಲೀಸರಿಗೆ ದೂರನ್ನು ನೀಡಿದ್ದಾರೆ.
ದೂರು ಬರುತ್ತಿದ್ದಂತೆ ಸ್ಥಳಕ್ಕೇ ಆಗಮಿಸಿದ ಉಪನಗ ರ ಪೊಲೀಸರು ಸ್ಥಳಕ್ಕೇ ಆಗಮಿಸಿ ಸಮಸ್ಯೆ ಕುರಿತಂ ತೆ ಮನೆಯ ಮಾಲೀಕರು ಮತ್ತು ಬಾಡಿಗೆದಾರರೊಂ ದಿಗೆ ಮಾತನಾಡಿದರು. ಸಧ್ಯ ಲಾಕ್ ಡೌನ್ ಇದೆ ಹೀಗಾಗಿ ಬಾಡಿಗೆದಾರರಿಗೆ ಯಾವುದೇ ತೊಂದರೆ ಯನ್ನು ಮಾಡದಂತೆ ಮಾಲೀಕರಿಗೆ ಪೊಲೀಸರು ಖಡಕ್ ಸೂಚನೆ ನೀಡಿದರು.
ಇನ್ನೂ ಪೊಲೀಸರ ಎದುರಿಗೆ ಬಾಡಿಗೆದಾರರು ಸರ್ ಪ್ರತಿ ತಿಂಗಳು ನಾವು ನೀರಿಗಾಗಿ 200 ರೂಪಾಯಿ ಕೊಡುತ್ತಿದ್ದೇವೆ ಆದರೆ ಇವರು ಹೀಗೆ ಮಾಡತಾ ಇದ್ದಾರೆ ಎನ್ನುತ್ತಾ ಇವತ್ತು ನಾವು ಮಳೆಯ ನೀರಿನ ಲ್ಲಿ ಸ್ನಾನವನ್ನು ಮಾಡಿದ್ದೇವೆ ಹೀಗೆ ಮಾಡಬೇಕು ಎನ್ನುತ್ತಾ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಸಧ್ಯ ಪೊಲೀಸರು ಬಾಡಿಗೆದಾರರಿಗೆ ಯಾವುದೇ ಸಮಸ್ಯೆ ತೊಂದರೆ ಮಾಡದಂತೆ ಮನೆಯ ಮಾಲೀಕ ರಿಗೆ ಹೇಳಿ ಸಮಸ್ಯೆಯನ್ನು ಸರಿ ಮಾಡಿ ಹೋಗಿದ್ದಾ ರೆ.