ನವಲಗುಂದ –
ರಾಜ್ಯದಲ್ಲಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯತ್ವದ ವಿರುದ್ದ ಶಿಕ್ಷಕರ ಅಸಮಾಧಾ ನ ಮುಂದುವರೆದಿದೆ.ಹೌದು ಸಂಘದ ಕಾರ್ಯಚ ಟುವಟಿಕೆಗಳ ವಿರುದ್ದ ಅಸಮಾಧನಗೊಂಡಿರುವ ನಾಡಿನ ಶಿಕ್ಷಕರು ನಾ ಮುಂದು ನೀ ಮುಂದು ಎನ್ನು ತ್ತಾ ಆ ಒಂದು ಸಂಘದ ವಿರುದ್ದ ಅಸಮಾಧನಾದ ಕೂಗನ್ನು ಎತ್ತಿದ್ದು ಆ ಒಂದು ಸಂಘದ ಸದಸ್ಯತ್ವ ಕ್ಕಾಗಿ 200 ರೂಪಾಯಿ ವಾರ್ಷಿಕ ಸದಸ್ಯತ್ವ ಹಣ ವನ್ನು ಕಟಾವಣೆ ಮಾಡದಂತೆ ಮನವಿ ನೀಡುತ್ತಿ ದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಇಂದು ಕೂಡಾ ನೂರಾರು ಶಿಕ್ಷಕರು ಇಂದು ಸಾಮೂಹಿಕವಾಗಿ ಮನವಿ ನೀಡಿ ವೇತನದಲ್ಲಿ ಯಾವುದೇ ಕಾರಣಕ್ಕೂ ಹಣವನ್ನು ಕಟಾವಣೆ ಮಾಡದಂತೆ ಒತ್ತಾಯವನ್ನು ಮಾಡಿದ ರು.ಕರ್ನಾಟಕ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಾರ್ಷಿಕ ಸದಸ್ಯತ್ವ 200 ರೂ ಗಳನ್ನು ಕಟಾವಣೆ ಮಾಡದಂತೆ ಜಿಲ್ಲೆಯ ನವಲಗುಂದ ತಾಲ್ಲೂಕಿನ ನೂರಾರು ಶಿಕ್ಷಕರು ಮತ್ತು ಪದಾಧಿಕಾರಿಗಳು ಇಂದು ಅಸಮ್ಮತಿ ಪತ್ರವನ್ನು ನೀಡಿದರು.
ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಪಸ್ಥಿತಿ ಯಲ್ಲಿ ಕಾರ್ಯಾಲಯದ ಶಿಕ್ಷಣ ಸಂಯೋಜಕರಾದ ಶ್ರೀಯುತ ಕೆ.ಆರ್.ಮುಲ್ಲಾ ಅವರ ಹಾಗೂ ಇಲಾಖೆ ಯ ಹಿರಿಯ ಸಿಬ್ಬಂದಿಯವರಾದ ಗದ್ದಿಗೌಡರ ಅವರಿಗೆ ಅಧ್ಯಕ್ಷರಾದ ಎಸ್ ಸಿ ಹೊಳೆಯಣ್ಣವರ ಹಾಗೂ ಉಪಾಧ್ಯಕ್ಷರಾದ ಎಸ್.ಬಿ.ಭಜಂತ್ರಿ, ಬಿ ಕೆ ಹಾಲವರ, ವಾಯ್.ಎಚ್.ಕೆಂಪಣ್ಣನವರ್ ,ಬಿ.ವ್ಹಿ. ಅಂಗಡಿ ಅವರು ಇಂದು ಮನವಿಯೊಂದಿಗೆ ಅಸ ಮ್ಮತಿ ಪತ್ರ ಸಲ್ಲಿಸಿದರು.
ರಾಜ್ಯಾದ್ಯಂತ ನಮ್ಮ ಗ್ರಾಮೀಣ ಸಂಘವು ನಿರ್ಣ ಯಿಸಿರುವುದರಿಂದ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವವರು ವೇತನ ಮಾಡುವ ಪೂರ್ವ ದಲ್ಲಿ ಕೂಡಲೆ ತಮ್ಮಅಸಮ್ಮತಿ ಪತ್ರ ಸಲ್ಲಿಸಿದರೆ ತಮ್ಮ ರೂ 200 ಗಳನ್ನು ಕಟಾವಣೆ ಮಾಡಲಾಗುವು ದಿಲ್ಲ ಶಿಕ್ಷಕ ಬಂಧುಗಳೆ ತಮ್ಮ ಸಹಕಾರ ನಮ್ಮ ಸಂಘಕ್ಕೆ ಇರಲಿ ಎಂದು ವಿನಂತಿಯೊಂದಿಗೆ ಈ ವಿಚಾರ ತಮ ಅವಗಾಹನೆಗೆ ನಮ್ಮ ಗ್ರಾಮೀಣ ಸಂಘ ತರಭಯಸುತ್ತದೆ.
ಅಧ್ಯಕ್ಷರು ಸರ್ವ ಪದಾಧಿಕಾರಿಗಳು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನವಲಗುಂದ