ಬೆಂಗಳೂರು –
ಮುಂದಿನ ನವೆಂಬರ್‌ನಲ್ಲಿ ಪೂರ್ವ ಪ್ರಾಥಮಿಕ ಶಾಲೆ ಗಳಲ್ಲಿ ಅಧಿಕೃತವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾ ನಕ್ಕೆ ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಸಚಿವ ಬಿ ಸಿ ನಾಗೇಶ್ ಹೇಳಿದರು.ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಕಚೇರಿಯಲ್ಲಿ ಮಾಹಿತಿ ನೀಡಿದರು
ಶಾಲಾ ಶಿಕ್ಷಣದ ಮೊದಲ ಹಂತವಾದ 3ರಿಂದ 5 ವರ್ಷದ ಮಕ್ಕಳಿಗೆ ಬಾಲ್ಯ ಪೂರ್ವ ಆರೈಕೆ ಮತ್ತು ಶಿಕ್ಷಣವನ್ನು (ಇಸಿಸಿಇ) ರಾಷ್ಟ್ರೀಯ ಶಿಕ್ಷಣ ನೀತಿ-2020 ಅಡಿ ಜಾರಿ ಗೊಳಿಸಲು ಸಿದ್ಧತೆ ನಡೆದಿದೆ.2022-23ನೇ ಸಾಲಿನಿಂದ ಎನ್‌ಇಪಿ ಜಾರಿಗೊಳಿಸಲು ರಾಜ್ಯದ 20 ಸಾವಿರ ಅಂಗನ ವಾಡಿಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.
ಎನ್‌ಇಪಿ ಅನ್ನು ಅನುಷ್ಠಾನ ಮಾಡುತ್ತಿರುವ ಮೊದಲ ರಾಜ್ಯ ನಮ್ಮದು.ಈ ಸಂಬಂಧ 26 ಪೊಸಿಷನ್ ಪೇಪರ್ ಅನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ.ಬೇರೆ ರಾಜ್ಯಗ ಳೂ ಸಲ್ಲಿಸಿದ್ದು ಎಲ್ಲವನ್ನೂ ಪರಿಗಣಿಸಿ ಕೇಂದ್ರ ಸರಕಾರವು ಅಕ್ಟೋಬರ್‌ನಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್)ಬಿಡುಗಡೆ ಮಾಡಲಿದೆ.ಇದನ್ನು ಆಧರಿಸಿ ಕರ್ನಾಟಕ ಪಠ್ಯಕ್ರಮ ಚೌಕಟ್ಟು (ಕೆಸಿಎಫ್) ರೂಪಿಸಲು 6 ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಸದ್ಯ 3 ವರ್ಷದ ಮಕ್ಕಳಿಗೆ ಒದಗಿಸಲಾಗುತ್ತಿರುವ ಚಿಲಿಪಿಲಿ ಮತ್ತು ಚಿಲಿಪಿಲಿ ಪ್ಲಸ್’ ಪಠ್ಯಕ್ರಮ ರಾಷ್ಟ್ರೀಯ ಶಿಕ್ಷಣ ನೀತಿ ಅನುಗುಣವಾಗಿದೆ.ಮತ್ತೂಮ್ಮೆ ನವೆಂಬರ್‌ನಲ್ಲಿ ಮೊದಲ ಹಂತದಲ್ಲಿ 20 ಸಾವಿರ ಅಂಗನವಾಡಿಗಳಲ್ಲಿ ಎನ್‌ಇಪಿ ಜಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.