ಧಾರವಾಡ –
ಹೆಸ್ಕಾಂ ನಲ್ಲಿ ಉದ್ಯೋಗ ಕೊಡಿಸುವ ಆಸೆ ಹಚ್ಚಿ ಕೆಲ ಯುವಕರಿಂದ ಹಣವನ್ನು ಕೈ ಪಕ್ಷದ ಮಹಿಳೆ ಫಾತಿಮಾ ಶೇಖ್ ಅವರು ತಗೆದುಕೊಂಡು ಚೀಟಿಂಗ್ ಮಾಡಿದ್ದರು. ಎಂದು ಯುವಕರ ಧ್ವನಿಗೆ ಸುದ್ದಿ ಸಂತೆ ವರದಿಯೊಂದನ್ನು ಪ್ರಕಟ ಮಾಡಿತ್ತು.

ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಫಾತಿಮಾ ಶೇಖ್ ಅವರು ಸ್ಪಂದಿಸಿ ಅವರ ಹೆಸರಿನಲ್ಲಿ ಬೇರೆ ಒಬ್ಬ ಮಹಿಳೆ ಹಣವನ್ನು ತಗೆದುಕೊಂಡು ಚೀಟಿಂಗ್ ಮಾಡಿದ್ದು ಬೆಳಕಿಗೆ ಬಂದಿತು. ಕೂಡಲೇ ಅವರು ಆ ಮಹಿಳೆಯಿಂದ ಹಣವನ್ನು ತಗೆದುಕೊಂಡು ಹಣ ಕೊಟ್ಟಿದ್ದ ಯುವಕ ರಿಗೆ ಮರಳಿ ಹಣವನ್ನು ಕೊಡಿಸಿದ್ದಾರೆ.

ಹಣವನ್ನು ಕೊಟ್ಟ ಒಂದು ವರ್ಷದಿಂದ ಪರದಾಡುತ್ತಿ ದ್ದ ಮೂವರು ಯುವಕರ ಧ್ವನಿಗೆ ನಿಮ್ಮ ಸುದ್ದಿ ಸಂತೆ ಸ್ಪಂದಿಸಿ ವರದಿಯೊಂದನ್ನು ಪ್ರಕಟಿಸಿತು. ವರದಿ ಗಾರ ಭರತ್ ಹೂಗಾರ ಅಚ್ಚುಕಟ್ಟಾಗಿ ಎಲ್ಲಾ ದಾಖಲೆಗಳನ್ನು ಶೇಖರಣೆ ಮಾಡಿ ಸುದ್ದಿ ಯೊಂದನ್ನು ಪ್ರಕಟ ಮಾಡಿದರು. ಸುದ್ದಿ ಬರುತ್ತಿದ್ದಂತೆ ಎದ್ದೊ ಬಿದ್ದೆ ಎಂಬಂತೆ ಫಾತಿಮಾ ಶೇಖ್ ಅವರು ತಮ್ಮ ಹೆಸರಿನಲ್ಲಿ ಮಾಡಿದ್ದ ಚೀಟಿಂಗ್ ಗೆ ಆ ಮಹಿಳೆಯನ್ನು ಕರೆದುಕೊಂಡು ಬಂದು ಹಣ ಮರಳಿಸಿದರು.

ಜಿಲಾನಿ ಖಾಜಿಯ ಪ್ರಯತ್ನ ಭರತ್ ಹೂಗಾರ ಒಂದೇ ಒಂದು ಸುದ್ದಿ ಯ ಬರವಣಿಗೆ ಯಿಂದಾಗಿ ಎರಡು ದಿನಗಳಲ್ಲಿ ಹಣ ಮರಳಿ ಯುವಕರ ಕೈಗೆ ತಲುಪಿದೆ.ವರದಿ ಪ್ರಕಟ ಮಾಡಿದ ಸುದ್ದಿ ಸಂತೆಗೆ ಯುವಕರು ಧನ್ಯವಾದಗಳೊಂದಿಗೆ ಖುಷಿಯಾಗಿ ಹಣ ತಗೆದುಕೊಂಡು ಹೋಗಿದ್ದಾರೆ. ಏನೇ ಆಗಲಿ ನಿಮ್ಮ ಈ ಒಂದು ಸುದ್ದಿ ಸಂತೆ ಯಾವಾಗಲೂ ಜನರ ಧ್ವನಿಗೆ ಸ್ಪಂದಿಸುತ್ತದೆ ಸದಾ ನಿಮ್ಮೊಂದಿಗೆ ಸಂಸ್ಥೆ. ಇನ್ನೂ ಸುದ್ದಿಗೆ ಸ್ಪಂದಿಸಿ ತಮ್ಮ ಹೆಸರಿನಲ್ಲಿ ಬೇರೆಯವರು ಮೊಸ ಮಾಡಿದ ಕುರಿತು ಗಮನಕ್ಕೆ ಬರುತ್ತಿದ್ದಂತೆ ಸ್ಪಂದಿಸಿದ ಫಾತಿಮಾ ಶೇಖ್ ಅವರ ಮಾನವೀಯತೆ ಶ್ಲಾಘನೀಯ