ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಶೀಘ್ರದಲ್ಲೇ ರಚನೆಯಾಗಿ ಜನೆವರಿ ತಿಂಗಳಲ್ಲಿ ಸರ್ಕಾರಿ ಆದೇಶ ಹೊರಬೀಳಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಹೇಳಿದರು.
ಈ ಒಂದು ವಿಚಾರದಲ್ಲಿ ಇನ್ನೂ ಕೂಡಾ ಕೆಲವರಿಗೆ ಇದು ಆಗುತ್ತದೆ ಇಲ್ಲ ಏನು ಎಂಬ ದೊಡ್ಡ ಆತಂಕ ಇದೆ ಒಂದು ಮಾತು ನೆನಪು ಇಟ್ಟುಕೊಳ್ಳಿ ಈ ಒಂದು ವಿಚಾರದಲ್ಲಿ ನಾನು ರಾಜ್ಯದ ಸರ್ಕಾರಿ ನೌಕರರಿಗೆ ಸುಳ್ಳು ಹೇಳಿ ಅಥವಾ ಏನನ್ನೊ ಹೇಳೊದಲ್ಲ ನಾವು ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಮುಗಿತು ಅದು ಆಗುವವರೆಗೂ ಬಿಡೊದಿಲ್ಲ ಹೇಳೊದೊಂದು ಮಾಡೊದೊಂದು ಯಾವತ್ತೂ ಮಾಡಿಲ್ಲ
ಮಾಡೊದಿಲ್ಲ ಸಂಘಟನೆ ಮತ್ತು ನಾನು ಯಾವಾಗಲೂ ರಾಜ್ಯದ ಸರ್ಕಾರಿ ನೌಕರರ ಮತ್ತು ಅವರ ಕುಟುಂಬದ ರಕ್ಷಣೆಗೆ ಸದಾ ಬದ್ದವಾಗಿದ್ದು ಇದು ನಮ್ಮ ಧ್ಯೇಯವಾಗಿದೆ ಎನ್ನುತ್ತಾ ಎದುರಾಳಿಗೆ ಸಖತ್ ಟಾಂಗ್ ನೀಡುತ್ತಾ ನಿಮ್ಮ ನೌಕರರ ಸಂಘ ನಿಮ್ಮೇಲ್ಲರ ನೌಕರರ ಸಂಘ ಹಿತವನ್ನು ಕಾಪಾಡಲು ಸದಾ ಯಾವಾಗಲೂ ಬದ್ದವಾಗಿದ್ದು ಶೀಘ್ರದಲ್ಲೇ ರಾಜ್ಯದ ಸರ್ಕಾರಿ ನೌಕರರು ಕಾಯುತ್ತಿರುವ 7ನೇ ವೇತನ ಆಯೋಗ ರಚನೆ ಕುರಿತಂತೆ ಸಿಹಿ ಸುದ್ದಿ ಸಿಗಲಿದೆ ಎಂದರು.