ಹುಬ್ಬಳ್ಳಿ –
ಮಹಾ ಶಿವರಾತ್ರಿ ಮಹೋತ್ಸವದ ಅಂಗವಾಗಿ ಕಳೆದ 53 ವರುಷಗಳಿಂದ ಹುಬ್ಬಳ್ಳಿಯಲ್ಲಿ ಶಿವಪ್ಪ ತೆಗ್ಗಿ ಮತ್ತು ಪರಿವಾರದವರು ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿ ವರುಷದಂತೆ ಈವರುಷವೂ ಕೂಡಾ ನಗರದ ಗಿರಣಿ ಚಾಳದಲ್ಲಿ ಹಮ್ಮಿಕೊಂಡಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಚಾಲನೆ ನೀಡಿದರು.

ಸತತವಾಗಿ 53 ವರ್ಷಗಳಿಂದ ಇಲ್ಲಿನ ಗಿರಣಿ ಚಾಳದಲ್ಲಿ ಈ ಒಂದು ಅನ್ನ ಸಂತರ್ಪಣೆಯನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. ದಿ. ಶಿವಪ್ಪ ಎಸ್. ತೆಗ್ಗಿ ಇವರ ಮಕ್ಕಳು ಶಿವರಾತ್ರಿ ಮಹೋತ್ಸವ ದ ಅಂಗವಾಗಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಯಾರಿಂದಲೂ ಯಾವುದೇ ದೇಣಿಗೆ ಪಡೆಯದೇ ನಡೆಸಿಕೊಂಡು ಬರುತ್ತಿದ್ದಾರೆ.

ಇಂದಿನ ಅನ್ನಸಂತರ್ಪಣೆಯ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಅಪಾರ ಆಪ್ತ ಕಾರ್ಯದರ್ಶಿ ಚಾಲನೆ ನೀಡಿ ನಂತರ ಮಾತನಾಡಿದ ಅವರು ತೆಗ್ಗಿ ಕುಟುಂಬದ ಕಾರ್ಯವನ್ನು ಶ್ಲಾಘಿಸಿದರು.

ಇನ್ನೂ ಇದೇ ವೇಳೆ ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಮತ್ತು ಅನುಪ ಬಿಜವಾಡ ಸೇರಿದಂತೆ ಹಲವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಇನ್ನೂ ಈ ಸಂದರ್ಭದಲ್ಲಿ ಅನೂಪ್ ಬಿಜವಾಡ, ಸುಭಾಷ್ ತೆಗ್ಗಿ ಸಹೋದರರು, ಶಂಕರ ವಾಲಿಕಾರ್, ಸದಾನಂದ ಪೂಜಾರ್ ಚಂದ್ರಶೇಖರ ಬೆಳವಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.