ಹುಬ್ಬಳ್ಳಿ –
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಜೈನ ಸಮುದಾಯದ ಯಾವುದೇ ಬೇಡಿಕೆ ಗಳನ್ನು ಈಡೇರಿಸದೇ ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ವರೂರು ನವಗ್ರಹ ತೀರ್ಥದ ಶ್ರೀ ಗುಣಧರನಂಧಿ ಮಹಾರಾಜರು ಆರೋಪಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶ್ರೀಗಳು, ಜೈನ ಸಮುದಾಯ ಅಲ್ಪ ಸಂಖ್ಯಾತರ ಸಮಾಜದಲ್ಲಿ ಒಂದಾಗಿದ್ದು ಈ ಸಮಾಜ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬೆಳವಣಿಗೆ ಆಗಬೇಕಿದೆ.
ಅದಕ್ಕಾಗಿ ಜೈನ ಅಭಿವೃದ್ದಿ ನಿಗಮ ಸ್ಥಾಪನೆ ಅತ್ಯಗತ್ಯ ವಾಗಿದ್ದು ಕೂಡಲೇ ನಿಗಮ ಸ್ಥಾಪನೆ ಮಾಡಬೇಕು ಎಂದು ಸರಕಾರಕ್ಕೆ ಒತ್ತಾಯ ಮಾಡಲಾಗಿತ್ತು ಸರಕಾರದಲ್ಲಿರುವ , ಸಚಿವರು ಸೇರಿದಂತೆ ಕೆಲ ಶಾಸಕರು ನಿಗಮ ಸ್ಥಾಪನೆ ಮಾಡುವ ಭರವಸೆ ನೀಡಿದ್ದರು. ಆದರೂ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿ ಸದೇ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಹೇಳಿದ್ದಾರೆ.
ಬಗ್ಗೆಯೂ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡದಿ ರುವುದು ಬೇಸರ ಮೂಡಿಸಿದೆ ಎಂದಿದ್ದಾರೆ.
ಸಮುದಾಯದ ಜನಪ್ರತಿನಿಧಿಗಳು ಸರಕಾರದಲ್ಲಿ ಇದ್ದಾರೆ. ಸಮುದಾಯದ ಜನರು ಸರಕಾರವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಆದಾಗ್ಯೂ ಕೂಡಾ ಈ ಸಣ್ಣ ಸಮಾಜದ ಅಭಿವೃದ್ಧಿಗೆ ಯಾವುದೇ ನೆರವು, ಯೋಜನೆ ನೀಡದೇ ಕಡೆಗಣಿಸಲಾಗಿದೆ.
ಇದೇ ರೀತಿ ನಿರ್ಲಕ್ಷ್ಯ ಧೋರಣೆ ಮುಂದುವರೆದರೆ, ರಾಜ್ಯ ಸರಕಾರದ ವಿರುದ್ಧ ಜೈನ ಸಮುದಾಯ ಹೋರಾಟ ಮಾಡಲಿದೆ ಎಂದು ಗುಣಧರನಂದಿ ಶ್ರೀಗಳು ಎಚ್ಚರಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..