ಹುಬ್ಬಳ್ಳಿ –
ಬೆಳ್ಳಂ ಬೆಳಿಗ್ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜೆಸಿಬಿ ಗಳು ಸದ್ದು ಮಾಡಿವೆ.ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಾರುಕಟ್ಟೆ ಪ್ರದೇಶವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಇಲ್ಲಿನ ವ್ಯಾಪಾರಿಗಳನ್ನು ಸ್ಥಳಾಂತರವನ್ನು ಈಗಾಗಲೇ ಮಾಡಲಾಗಿದೆ.ಹೊಸೂರ ಮತ್ತು ಕ್ಲಾರ್ಕ್ ಇನ್ ಹೊಟೇಲ್ ಹಿಂದೆ ಹೀಗೆ ಎರಡು ಸ್ಥಳವನ್ನು ತೊರಿಸಿದ್ದು ಶಿಪ್ಟ್ ಆಗುವಂತೆಯೂ ಕೂಡಾ ಹೇಳಲಾಗಿದೆ.ಆದರೂ ಸ್ಥಳಾಂತರಗೊಂಡಿಲ್ಲ .ಇನ್ನೂ ಕಾಮಗಾರಿ ಆರಂಭ ಹಿನ್ನೆಲೆಯಲ್ಲಿ ಇಂದು ಜನತಾ ಬಜಾರ್ ನಲ್ಲಿ ತೆರವು ಕಾರ್ಯಾಚರಣೆ ಆರಂಭವಾಯಿತು.
ಹು-ಧಾ ಮಹಾನಗರ ಪಾಲಿಕೆಯಿಂದ ತೆರವು ಕಾರ್ಯಾಚರಣೆ ನಡೆಯಿತು.ಕಾರ್ಯಾಚರಣೆ ಹಿನ್ನಲೆಯಲ್ಲಿ ಪಾಲಿಕೆ ಕಾರ್ಯಾಚರಣೆಗೆ ವ್ಯಾಪಾರಸ್ಥರಿಂದ ವಿರೋಧ ವ್ಯಕ್ತವಾಯಿತು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜನತಾ ಬಜಾರ್ ನ್ನು ನವೀಕರಣ ಹಿನ್ನೆಲೆಯಲ್ಲಿ ಈ ಒಂದು ಕಾರ್ಯಾಚರಣೆ ಮಾಡಲಾಯಿತು.
ನವೀಕರಣಕ್ಕೆ ಸ್ಥಳೀಯ ವ್ಯಾಪಾರಸ್ಥರಿಂದ ವಿರೋಧ ವ್ಯಕ್ತವಾಯಿತು.ಇನ್ನೂ ಇಲ್ಲಿನ ವಿರೋಧದ ನಡುವೆಯೇ ಕಾರ್ಯಾಚರಣೆ ಮಾಡಲಾಯಿತು.ಹಲವಾರು ಬಾರಿ ನೋಟಿಸ್ ನೀಡಿ ಇಂದು ಕಾರ್ಯಾಚರಣೆ ಮಾಡಲಾಯಿತು. ಹೊಸೂರು ಬಳಿ ವ್ಯಾಪಾರಸ್ಥರಿಗೆ ಸ್ಥಳಾವಕಾಶವನ್ನು ಈಗಾಗಲೇ ಪಾಲಿಕೆಯವರು ಮಾಡಿದ್ದಾರೆ.ಅಲ್ಲಿ ಯಾವುದೇ ಮಳಿಗೆ ಸ್ಥಾಪಿಸಿದೆ ಸ್ಥಳಾಂತರ ಮಾಡುತ್ತಿದ್ದಾರೆಂದು ವ್ಯಾಪಾರಸ್ಥರು ಆರೋಪ ಮಾಡಿದರು. 170 ಕ್ಕೂ ಹೆಚ್ಚು ಮಳಿಗೆಗಳನ್ನು ತೆರವು ಮಾಡಲಾಯಿತು.ಸ್ಥಳದಲ್ಲಿ, ಪಾಲಿಕೆ ಅಧಿಕಾರಿಗಳು ಮತ್ತು ಉಪನಗರ ಪೊಲೀಸರ ಸ್ಥಳದಲ್ಲೇ ಇದ್ದರು.