ಹುಬ್ಬಳ್ಳಿ –
ಬೆಳ್ಳಂ ಬೆಳಿಗ್ಗೆ ಹುಬ್ಬಳ್ಳಿಯ ಶಿರೂರ ಪಾರ್ಕ್ ನಲ್ಲಿ ದೊಡ್ಡ ಅವಘಡವೊಂದು ತಪ್ಪಿದೆ. ರಸ್ತೆ ಪಕ್ಕದಲ್ಲಿನ ದೊಡ್ಡದಾದ ಮರವೊಂದು ಮುರಿದುಕೊಂಡು ಬಿದ್ದಿದೆ. ಶಿರೂರ ಪಾರ್ಕ್ ನ ಮುಖ್ಯರಸ್ತೆಯ ಬಳಿ ಮರವೊಂದು ಏಕಾಎಕಿಯಾಗಿ ಮುರಿದುಕೊಂಡು ನೆಲಕ್ಕುರುಳಿದೆ.
ನಿನ್ನೆ ಬೆಳಿಗ್ಗೆ ಈ ಒಂದು ಮರದ ಕೊಂಬೆ ಮುರಿದು ಬಿದ್ದಿದ್ದು ಸಾಕಷ್ಟು ಪ್ರಮಾಣದಲ್ಲಿ ಮರದ ಕೆಳಗೆ ತಿರುಗಾಡುತ್ತಿದ್ದು ಸಮಯ ತುಂಬಾ ಚನ್ನಾಗಿದೆ. ಯಾರಿಗೂ ಯಾವುದೇ ಅನಾಹುತಗಳಾಗಿಲ್ಲ.
ಹೀಗಾಗಿ ದೊಡ್ಡ ಪ್ರಮಾಣದಲ್ಲಿನ ದುರಂತವೊಂದು ತಪ್ಪಿದಂತಾಗಿದ್ದು ಇನ್ನೂ ನಿನ್ನೇ ಮುರಿದುಕೊಂಡು ಹೀಗೆ ರಸ್ತೆ ಪಕ್ಕದಲ್ಲಿ ಬಿದ್ದರೂ ಕೂಡಾ ಈವರೆಗೆ ಪಾಲಿಕೆಯವರಾಗಲಿ ಇನ್ನೂ ಈಕಡೆ ತಿರುಗಿ ನೋಡಿಲ್ಲವಂತೆ ಇದರಿಂದ ಮತ್ತೇನಾದರೂ ಅನಾಹುತವಾಗುತ್ತದೆನಾ ಎಂಬ ಚಿಂತೆಯಲ್ಲಿ ಸಾರ್ವಜನಿಕರು ತಿರುಗಾಡುತ್ತಿದ್ದಾರೆ.
ಈ ಕುರಿತಂತೆ ಸಾಕಷ್ಟು ಪ್ರಮಾಣದಲ್ಲಿನ ಸಾರ್ವಜನಿಕರು ಪಾಲಿಕೆಗೆ ಮತ್ತು ಸಂಭಂಧಿಸಿದ ಇಲಾಖೆಗೆ ದೂರು ನೀಡಿದರು ಕೂಡಾ ಯಾರು ಸ್ಪಂದಿಸುತ್ತಿಲ್ಲವಂತೆ ಇದರಿಂದ ಸಂಚಾರದಲ್ಲಿ ಮತ್ತು ಮುಖ್ಯ ರಸ್ತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಕರಿಗೆ ತೊಂದರೆಯಾಗಿದ್ದು ಪರದಾಡುತ್ತಿದ್ದಾರೆ.
ಮುಖ್ಯ ರಸ್ತೆಯಲ್ಲಿ ಈ ಒಂದು ಮರ ಮುರಿದುಕೊಂಡು ಬಿದ್ದಿದ್ದು ಮತ್ತೆನಾದರೂ ಅನಾಹುತ ಆಗುವ ಮುನ್ನ ಇನ್ನಾದರೂ ಪಾಲಿಕೆಯವರು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಸರಿಪಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.
Pr
1154