ಹುಬ್ಬಳ್ಳಿ –
ಉಪ ಚುನಾವಣೆ ಕರ್ತವ್ಯದಲ್ಲಿ ಸೋಂಕಿತರಾಗಿ ಮೃತರಾದ ಶಿಕ್ಷಕರ ಕುಟುಂಬಕ್ಕೆ ಒಂದು ಕೋಟಿ ರೂ.ಪರಿಹಾರ ನೀಡಬೇಕು ಹಾಗೂ ಕೋವಿಡ್ ಕರ್ತವ್ಯಕ್ಕೆ ನಿಯುಕ್ತರಾದ ಶಿಕ್ಷಕರನ್ನು ತತ್ ಕ್ಷಣದಿಂ ದ ಬಿಡುಗಡೆಗೊಳಿಸಬೇಕೆಂದು ಗ್ರಾಮೀಣ ಶಿಕ್ಷಕರ ಸಂಘ ಆಗ್ರಹ ಮಾಡಿದೆ

ಈ ಮೇಲ್ಕಾಣಿಸಿದ ವಿಷಯದನ್ವಯ ನಾವುಗಳಾದ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ, ರಾಜ್ಯ ಘಟಕ ಹುಬ್ಬಳ್ಳಿಯ ಅಧ್ಯ ಕ್ಷರು,ಪ್ರಧಾನ ಕಾರ್ಯದರ್ಶಿಗಳು ಹಾಗೂ ಸರ್ವ ಹಂತದ ಸಮಸ್ತ ಪದಾಧಿಕಾರಿಗಳು ಈ ಮೂಲಕ ವಿನಂತಿಸಿಕೊಂಡಿದ್ದಾರೆ

ಕೋವಿಡ್ 19 ರ 2 ನೇ ಅಲೆಯಲ್ಲಿ ಶಿಕ್ಷಕರು ಕೋವಿ ಡ್ ಸೋಂಕಿನಿಂದ ನಾಲ್ಕುನೂರರಷ್ಟು ಶಿಕ್ಷಕರು ಸಾವಿಗೀಡಾಗಿದ್ದಾರೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸು ತ್ತಿರುವ ಎಲ್ಲಾ ಶಿಕ್ಷಕರನ್ನು ಕೊರೋನಾ ವಾರಿಯ ರ್ಸ್ ಅಂತ ಪರಿಗಣಿಸಬೇಕು ಅಲ್ಲದೇ ಈಗಾಗಲೇ ಕೊರೋನಾ ಸೋಂಕಿನಿಂದ ಮೃತರಾದ ಶಿಕ್ಷಕರನ್ನು ಕೊರೋನಾ ವಾರಿಯರ್ಸ್ ಅಂತ ಪರಿಗಣಿಸಿ ಕೂಡ ಲೇ ಸರ್ಕಾರವು ಮೃತರಾದ ಶಿಕ್ಷಕರ ಕುಟುಂಬಗಳಿಗೆ ೫೦ ಲಕ್ಷ ರೂಪಾಯಿ ಕೋವಿಡ್ ವಿಮೆಯನ್ನು ಮಂಜೂರು ಮಾಡಬೇಕು ಹಾಗೂ ಉಪ ಚುನಾವ ಣೆ ಕರ್ತವ್ಯದಿಂದ ಸೋಂಕಾಗಿ ಮೃತರಾದ ಶಿಕ್ಷರಿಗೆ ಚುನಾವಣಾ ಆಯೋಗ ಐವತ್ತು ಲಕ್ಷ ಹಾಗೂ ಸರ್ಕಾ ರ ಐವತ್ತು ಲಕ್ಷ ಒಟ್ಟು ಒಂದು ಕೋಟಿ ಪರಿಹಾರ ನೀಡಬೇಕೆಂದು ಸಂಘದ ಸದಸ್ಯರು ಒತ್ತಾಯ ಮಾಡಿದ್ದಾರೆ






ಕೋವಿಡ್ ಕರ್ತವ್ಯಕ್ಕೆ ನಿಯುಕ್ತಿಗೊಂಡ ಶಿಕ್ಷಕರನ್ನು ತತ್ ಕ್ಷಣದಿಂದ ಕೈ ಬಿಟ್ಟು ಬಿಡುಗಡೆಗೊಳಿಸಬೇ ಕೆಂದು ಸರ್ಕಾರಕ್ಕೆ ಈ ಮೂಲಕ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ ಸಜ್ಜನ .ಪ್ರಧಾನ ಕಾರ್ಯದ ರ್ಶಿಗಳಾದ ಮಲ್ಲಿಕಾರ್ಜುನ ಉಪ್ಪಿನ್ ಗೌರವಾಧ್ಯಕ್ಷ ರಾದ ಎಲ್ ಐ ಲಕ್ಕಮ್ಮನವರ ಕೋಶಾಧ್ಯಕ್ಷರಾದ ಎಸ್ ಎಫ್ ಪಾಟೀಲ್ ಕಾರ್ಯಾಧ್ಯಕ್ಷರಾದ ಶರಣಪ್ಪ ಗೌಡ ಆರ್ ಕೆ ಮಹಾಪೋಷಕರಾದ ಪವಾಡಪ್ಪ ಕಾಂಬ್ಳೆ ಉಪಾಧ್ಯಕ್ಷರುಗಳಾದ ಗೋವಿಂದ ಜುಜಾರೆ ಹನುಮಂತಪ್ಪ ಮೇಟಿ. ಡಿ.ಎಸ್.ಭಜಂತ್ರಿ. ಕುಕನೂ ರ.ರಾಮಪ್ಪ ಹಂಡಿ .ಎಮ್ ಆಯ್ ಮುನವಳ್ಳಿ ಮಹ್ಮದ್ ರಫಿ .ಡಿ ಟಿ ಬಂಡಿವಡ್ಡರ ರಾಜ್ಯ ಪದಾಧಿ ಕಾರಿಗಳಾದ ಶರಣಬಸವ ಬನ್ನಿಗೋಳ.ಎಂ.ವಿ ಕುಸುಮಾ.ರಾಜಶ್ರೀ ಪ್ರಭಾಕರ್ ಜಿ ಟಿ ಲಕ್ಷ್ಮೀದೇವ ಮ್ಮ ಕಲ್ಪನಾ ಚಂದನಕರ. ರವಿ ಬಂಗೆನ್ನವರ ಶಿವರಡ್ಡಿ .ಅಶೋಕ.ಬಿಸೆರೊಟ್ಟಿ ನಾಗರಾಜ್ ಆತಡಕರ ನಾಗರಾಜ್ ಕೆ .ರೇಖಾ ದೇವಿ ದೇವಿಕಾ ಕಮ್ಮಾರ ಮುಂತಾದ ಪದಾಧಿಕಾರಿಗಳು ಮುಖ್ಯ ಮಂತ್ರಿಗಳವರಿಗೆ ಶಿಕ್ಷಣ ಸಚಿವರಿಗೆ ಹಾಗೂ ಆರೋಗ್ಯ ಸಚಿವರಿಗೆ ಆಗ್ರಹ ಮಾಡಿದ್ದಾರೆ
ಕೋವಿಡ್ -19 . 2 ನೇ ಅಲೆಯಲ್ಲಿ ಕೊರೊನಾ ವೈರಸ್ ನಿಂದ ಮೃತರಾದ ಶಿಕ್ಷಕರ ಜಿಲ್ಲಾವಾರು ಮಾಹಿತಿ
01.ಬೆಂಗಳೂರು ಗ್ರಾಮಾಂತರ -10
02.ವಿಜಯಪುರ -39
03.ದಕ್ಷಿಣ ಕನ್ನಡ -00
04.ಉಡುಪಿ -00
05. ಚಿತ್ರದುರ್ಗ -10
06.ಮೈಸೂರು -10
07.ತುಮಕೂರು -19
08.ದಾವಣಗೆರೆ –14
09.ಚಿಕ್ಕಮಗಳೂರು -09
10.ಬೆಳಗಾವಿ -14
11.ಹಾಸನ -15
12.ಚಾಮರಾಜನಗರ -01
13.ಉತ್ತರ ಕನ್ನಡ -03
14.ಹಾವೇರಿ -02
15.ಕೊಡಗು -00
16.ಶಿವಮೊಗ್ಗ -04
17.ಬಳ್ಳಾರಿ -18
18.ರಾಯಚೂರು -06
19.ಶಿರಸಿ -00
20.ಚಿಕ್ಕೋಡಿ -22
21.ರಾಮನಗರ -05
22.ಕಲಬುರಗಿ -10
23.ಬಾಗಲಕೋಟೆ -05
24.ಮಧುಗಿರಿ -09
25.ಕೊಪ್ಪಳ -07
26.ಯಾದಗಿರಿ -05
27.ಗದಗ-06
28.ಚಿಕ್ಕಬಳ್ಳಾಪುರ -08
29.ಬೀದರ-55
30.ಧಾರವಾಡ -09
31.ಕೋಲಾರ -14
32.ಬೆಂಗಳೂರು ಉತ್ತರ -36
33.ಮಂಡ್ಯ-00
34.ಬೆಂಗಳೂರು ದಕ್ಷಿಣ -05