ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ 1 ರಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಪರ ಸಾಕಷ್ಟು ಒಲವು ಕಂಡು ಬರುತ್ತಿದೆ.ಇವರೊಬ್ಬರು ಸರಳ ಸಜ್ಜನಿಕೆಯ ಅಭ್ಯರ್ಥಿ ಮೇಲಾಗಿ ನಮ್ಮವರೇ ಎಂದುಕೊಂಡು ಆರಂಭದಿಂದಲೂ ನಿರ್ಮಲಾ ಹೊಂಗಲ ಅವರನ್ನು ಬೆಂಬಲಿಸುತ್ತಾ ಬಂದಿರುವ ವಾರ್ಡ್ 1 ಜನರು ಈ ಬಾರಿ ಇವರೇ ಬಾಸ್ ಎನ್ನುತ್ತಿದ್ದಾರೆ.


ಇದರ ನಡುವೆ ಪಕ್ಷದ ಅಭ್ಯರ್ಥಿ ಪರವಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ವಿನಯ ಕುಲಕರ್ಣಿ ಅವರು ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ.ಇಂದು ವಾರ್ಡ್ 1 ರಲ್ಲಿ ಪಕ್ಷದ ಅಭ್ಯರ್ಥಿ ನಿರ್ಮಲಾ ಮಲ್ಲಿಕಾರ್ಜುನ ಹೊಂಗಲ ಪರ ಮೊದಲು ಈಶ್ವರ ದೇವಸ್ಥಾನದಲ್ಲಿ ವಿಶೇಷ ವಾದ ಪೂಜೆಯನ್ನು ಸಲ್ಲಿಸಿದ ಅವರು ಗೆಲುವಿಗಾಗಿ ಪ್ರಾರ್ಥನೆಯನ್ನು ಮಾಡಿದರು.

ನಂತರ ಅಲ್ಲಿಂದ ಆರಂಭಗೊಂಡ ಪ್ರಚಾರದ ಯಾತ್ರೆ ವಾರ್ಡ್ ನ ಹಲವೆಡೆ ಪಾದಯಾತ್ರೆ ಮೂಲಕ ತೆರಳಿದರು.ಮನೆ ಮನೆಗೆ ತೆರಳಿ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದರು.

ಪ್ರಮುಖವಾಗಿ ಈ ಹಿಂದೆ ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ಅವರು ಶಾಸಕರಾಗಿದ್ದ ಅದರಲ್ಲೂ ಸಚಿವರಾಗಿದ್ದ ಸಮಯದಲ್ಲಿ ವಾರ್ಡ್ ನಲ್ಲಿ ಮಾಡಿದ ಕೈಗೊಂಡ ಕೆಲಸ ಕಾರ್ಯಗಳನ್ನು ಮತದಾರರ ಮುಂದೆ ಇಟ್ಟು ಮತವನ್ನು ಕೇಳಿದರು.

ವಾರ್ಡ್ ನಲ್ಲಿ ನೀವು ಕೂಡಾ ಬದಲಾವಣೆ ಬಯ ಸಿದ್ದು ಸಂತೋಷದ ವಿಚಾರ ಅದು ನಮ್ಮ ಪಕ್ಷದ ಅಭ್ಯರ್ಥಿಯಿಂದಲೇ ಆಗಲಿ ಇದೊಂದು ಬಾರಿ ನಿರ್ಮಲಾ ಹೊಂಗಲ ಅವರಿಗೆ ಮತವನ್ನು ಹಾಕಿ ನಿಮ್ಮ ಸೇವೆಗೆ ಅವಕಾಶವನ್ನು ನೀಡಿ ಎಂದು ಕೇಳಿಕೊಂಡರು.
https://youtu.be/RHXoZzJyKfc

ಇವರೊಂದಿಗೆ ಪಕ್ಷದ ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಆಪ್ತರು ಸೇರಿದಂತೆ ಹಲವರು ಪಾಲ್ಗೊಂಡು ಇವರೊಂದಿಗೆ ಪಾದಯಾತ್ರೆ ಮಾಡುತ್ತಾ ಮತಯಾಚನೆಯನ್ನು ಮಾಡಿದರು.

ಇದರೊಂದಿಗೆ ಶಿವಲೀಲಾ ವಿನಯ ಕುಲಕರ್ಣಿ ಅವರು ವಾರ್ಡ್ ನಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಅಬ್ಬರದ ಮತಯಾಚನೆ ಮಾಡಿದರು.
