ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರು ತ್ತಿದೆ.ಹೊಸ ಕನಸು ಹೊಸ ಯೋಜನೆ ಅಭಿವೃದ್ದಿಯ ಉತ್ಸಾಹದೊಂದಿಗೆ ಧಾರವಾಡದ 1 ನೇ ವಾರ್ಡ್ ನಲ್ಲಿ ಕೈ ಪಕ್ಷದಿಂದ ಶ್ರೀಮತಿ ನಿರ್ಮಲಾ ಮಲ್ಲಿಕಾರ್ಜುನ ಹೊಂಗಲ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ.


ಹತ್ತಾರ ಹೊಸ ಹೊಸ ಕನಸು ಭರವಸೆಯೊಂದಿಗೆ ಮಾದರಿ ವಾರ್ಡ್ ನ್ನಾಗಿ ಮಾಡುವ ಕನಸಿನೊಂದಿಗೆ ಅಖಾಡಕ್ಕಿಳಿದರುವ ನಿರ್ಮಲಾ ಹೊಂಗಲ ಅವರಿಗೆ ವಾರ್ಡ್ ನಲ್ಲಿ ಅಭೂತಪೂರ್ಣವಾದ ಬೆಂಬಲ ಕಂಡು ಬರುತ್ತಿದೆ.

ಪ್ರೀತಿ ವಿಶ್ವಾಸದಿಂದ ತಾವಾಗಿಯೇ ಇವರ ಬೆನ್ನಿಗೆ ನಿಂತುಕೊಂಡಿದ್ದು ಇಂದು ವಾರ್ಡ್ ನ ಹಲವೆಡೆ ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ.ಯುವ ಟೀಮ್ ಮತ್ತು ವಾರ್ಡ್ ನ ಗುರು ಹಿರಿಯರು ಮತ್ತು ಮುಖಂಡರೊಂದಿಗೆ ಮಹಿಳಾ ಮಣಿಗಳೊಂದಿಗೆ ಮನೆ ಮನೆಗೆ ತೆರಳಿ ಪ್ರಚಾರವನ್ನು ಮಾಡುತ್ತಿದ್ದಾರೆ.

ಮನೆ ಮನೆಗೆ ತೆರಳಿ ಮತಯಾಚನೆ ಮಾಡಲು ಹೋಗುತ್ತಿದ್ದಂತೆ ಮತದಾರರಿಂದ ಅಭೂತಪೂರ್ವ ಬೆಂಬಲ ಅಕ್ಕರೆಯ ಮಾತುಗಳು ಕೇಳಿ ಬರುತ್ತಿದ್ದು ಬದಲಾವಣೆ ಬಯಸಿರುವ ನಿಮ್ಮೊಂದಿಗೆ ನಾವಿದ್ದೇ ವೆ ಎಂಬ ಮಾತನ್ನು ಹೇಳುತ್ತಿದ್ದಾರೆ.

ಇದೇ ಉತ್ಸಾಹದಲ್ಲಿ ಇವರು ಕೂಡಾ ಎಲ್ಲರೊಂದಿಗೆ ತೆರಳಿ ವಾರ್ಡ್ ನಲ್ಲಿ ಬಿಡುವಿಲ್ಲದೇ ಪ್ರಚಾರವನ್ನು ಮಾಡುತ್ತಿದ್ದಾರೆ.ಈಗಾಗಲೇ ಪಕ್ಷದಲ್ಲಿ ಇದ್ದುಕೊಂಡು ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ಕಾರ್ಯ ಗಳನ್ನು ಮಾಡಿದ್ದಾರೆ