ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಪ್ರಚಾರ ಜೋರಾಗಿದೆ.ಅದರಲ್ಲೂ ಧಾರವಾಡದ ವಾರ್ಡ್ 1 ರಲ್ಲಿ ಹೊಸ ಬದಲಾವಣೆ ಬಯಸಿ ಹೊಸ ಕನಸಿನೊಂದಿಗೆ ಕಾಂಗ್ರೆಸ್ ಪಕ್ಷದಿಂದ ನಿರ್ಮಲಾ ಹೊಂಗಲ ಸ್ಪರ್ಧೆ ಮಾಡಿದ್ದು ವಾರ್ಡ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜನ ಬೆಂಬಲ ಕಂಡು ಬರುತ್ತಿದೆ.

ಇಂದು ವಾರ್ಡ್ ನ ಹಲವೆಡೆ ಅಬ್ಬರದ ಪ್ರಚಾರವನ್ನು ಮಾಡಿದರು. ಪಕ್ಷದ ನಾಯಕರು ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದಿಂದ ಈವರೆಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟರು
ಕಾಳೆ ಪ್ಲಾಟ್, ಮಂಗಳಗಟ್ಟಿ ಪ್ಲಾಟ್,ಸಾಧನಕೇರಿ ಸೇರಿದಂತೆ ಹಲವೆಡೆ ಬೆಳ್ಳಂ ಬೆಳಿಗ್ಗೆ ತೆರಳಿ ಮತಯಾಚನೆ ಮಾಡಿದರು ಮನೆ ಮನೆಗೆ ಪಾದಯಾತ್ರೆ ಮೂಲಕ ಪ್ರಚಾರ ಮಾಡಿದರು

ಪಕ್ಷದ ಅಭ್ಯರ್ಥಿ ಶ್ರೀಮತಿ ನಿರ್ಮಲಾ ಹೊಂಗಲ ಅವರೊಂದಿಗೆ ಸೋಮು ಬಸವಣ್ಣನವರ,ಸುರೇಶ ಯಲಿಗಾರ,ಶಿವಾನಂದ ಮೆಣಸಿನಕಾಯಿ,ಅಕ್ತರ್ ಕಿತ್ತೂತ,ಅಹದ ಅಲಂ ಕಿತ್ತೂರ,ಲಲಿತಾ ಕಾಳೆ ಸೇರಿದಂತೆ ಹಲವರು ಸಾಥ್ ನೀಡಿ ಪ್ರಚಾರ ಮಾಡಿದರು
