ಧಾರವಾಡ –
ಬದಲಾವಣೆ ಬಯಸಿ ಹೊಸ ಕನಸಿನೊಂದಿಗೆ ಏನಾದರೂ ಮಾಡಿ ವಾರ್ಡ್ ನ್ನು ಅಭಿವೃದ್ದಿ ಮಾಡಬೇಕು ಮತದಾರರ ಸೇವೆಯೆ ನನ್ನ ಗುರಿ ನನ್ನ ಉದ್ದೇಶ. ಕೇಂದ್ರದಲ್ಲೂ ನಮ್ಮದೇ ಸರ್ಕಾರ ರಾಜ್ಯ ದಲ್ಲೂ ನಮ್ಮದೇ ಸರ್ಕಾರ ಈಬಾರಿ ಪಾಲಿಕೆಯಲ್ಲೂ ನಾವೇ ಅಧಿಕಾರವನ್ನು ಹಿಡಿಯೊದು ಹೀಗೆ ಎಂದು ಕೊಂಡು ಧಾರವಾಡದ ವಾರ್ಡ್ 16 ರಲ್ಲಿ ಬಿಜೆಪಿ ಪಕ್ಷದಿಂದ ರಾಜೇಶ್ವರಿ ಸಾಲಗಟ್ಟಿ ಸ್ಪರ್ಧೆ ಮಾಡಿದ್ದಾರೆ

ಪಕ್ಷದಿಂದ ಟಿಕೇಟ್ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಅಖಾಡಕ್ಕೆ ಇಳಿದರುವ ಇವರು ಈಗಾಗಲೇ ಪಕ್ಷದಲ್ಲಿದ್ದುಕೊಂಡು ಶಾಸಕರು ಸಂಸದರ ಮೂಲಕ ಸಾಕಷ್ಟು ಜನರ ಸೇವೆಯನ್ನು ಮಾಡಿ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಿ ರುವ ಇವರ ಸ್ಪರ್ಧೆಯಿಂದ ವಾರ್ಡ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸ್ಪಂದನೆ ಸಿಗುತ್ತಿದೆ.

ವಾರ್ಡ್ ಬದಲಾವಣೆಯಾದರೂ ಕೂಡಾ ಹೊಸ ಕನಸು ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿದಿರುವ ಇವರಿಗೆ ಉತ್ತಮ ಸ್ಪಂದನೆ ಸಿಗುತ್ತಿದ್ದು ಪ್ರಚಾರಕ್ಕೆ ಹೋದಲ್ಲೆಲ್ಲ ಒಳ್ಳೇಯ ಭರವಸೆಯ ಮಾತುಗಳು ಉತ್ಸಾಹದ ಗೆಲುವಿನ ಆಸೆಯ ಮಾತುಗಳನ್ನು ವಾರ್ಡ್ ನ ಜನರು ಹೇಳುತ್ತಿದ್ದಾರೆ.

ಪ್ರಚಾರಕ್ಕೆ ಹೋದಲೆಲ್ಲ ನಮಗೂ ನಿಮ್ಮಂಥವರೇ ಬೇಕಾಗಿದೆ ಬದಲಾವಣೆ ಬೇಕಾಗಿದೆ ನಮಗೆ ನೀವು ಬಂದಿದ್ದು ತುಂಬಾ ತುಂಬಾ ಅನುಕೂಲ ಯಾವುದೇ ಕಾರಣಕ್ಕೂ ನಿಮ್ಮೊಂದಿಗೆ ನಾವಿದ್ದೇವೆ ನೀವು ಬಂದರೆ ನಮಗೂ ಅನುಕೂಲ ನಿಮ್ಮಂಥ ಸರಳ ಸಜ್ಜನಿಕೆಯ ನಾಯಕರೇ ನಮ್ಮ ವಾರ್ಡ್ ಗೆ ಬೇಕು ಎನ್ನುತ್ತಿದ್ದಾರೆ.

ಇದೇ ಉತ್ಸಾಹದಲ್ಲಿ ರಾಜೇಶ್ವರಿ ಸಾಲಗಟ್ಟಿ ಯವರು ಪ್ರಚಾರವನ್ನು ಮಾಡುತ್ತಿದ್ದಾರೆ.ಇಂದು ಕೂಡಾ ವಾರ್ಡ್ ನ ಹಲವೆಡೆ ಅಬ್ಬರದ ಪ್ರಚಾರವನ್ನು ಮಾಡಿದರು. ಲೈನ್ ಬಜಾರ್ ಸೇರಿದಂತೆ ಹಲವೆಡೆ ಪಾದಯಾತ್ರೆಯ ಮೂಲಕ ತೆರಳಿ ಪ್ರಚಾರ ಮಾಡುತ್ತಾ ಮತಯಾಚನೆ ಮಾಡಿದರು.

ರಾಜೇಶ್ವರಿ ಸಾಲಗಟ್ಟಿ ಅವರೊಂದಿಗೆ ರಾಜು ಕೋಟೆನ್ನವರ,ಮಂಜುನಾಥ ನೀರಲಕಟ್ಟಿ ಸೇರಿದಂತೆ ಹಲವರು ಸಾಥ್ ನೀಡಿ ಮತಯಾಚನೆ ಮಾಡಿದರು.