ಧಾರವಾಡದ ವಾರ್ಡ್ 2 ರಲ್ಲಿ ಈ ಬಾರಿ ನೀವೆ ಎನ್ನುತ್ತಿದ್ದಾರೆ ಮತದಾರರು – ನಿಂಗವ್ವ ಹಾರಿಕೊಪ್ಪ ಅವರೇ ಈ ಬಾರಿ ನಿಶ್ಚಿತ ಮತದಾರರ ಮಾತು…..

Suddi Sante Desk

ಧಾರವಾಡ –

ಬದಲಾವಣೆ ಬಯಸಿ ಹೊಸ ಕನಸಿನೊಂದಿಗೆ ಏನಾದರೂ ಮಾಡಿ ವಾರ್ಡ್ ನ್ನು ಅಭಿವೃದ್ದಿ ಮಾಡಬೇಕು ಮತದಾರರ ಸೇವೆಯೆ ನನ್ನ ಗುರಿ ನನ್ನ ಉದ್ದೇಶ. ಕೇಂದ್ರದಲ್ಲೂ ನಮ್ಮದೇ ಸರ್ಕಾರ ರಾಜ್ಯದಲ್ಲೂ ನಮ್ಮದೇ ಸರ್ಕಾರ ಈ ಬಾರಿ ಪಾಲಿಕೆ ಯಲ್ಲೂ ನಾವೇ ಅಧಿಕಾರವನ್ನು ಹಿಡಿಯೊದು ಹೀಗೆ ಎಂದುಕೊಂಡು ಧಾರವಾಡದ ವಾರ್ಡ್ 2 ರಲ್ಲಿ ಬಿಜೆಪಿ ಪಕ್ಷದಿಂದ ನಿಂಗವ್ವ ಹಾರಿಕೊಪ್ಪ ಸ್ಪರ್ಧೆ ಮಾಡಿದ್ದಾರೆ.

ಪಕ್ಷದಿಂದ ಟಿಕೇಟ್ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಅಖಾಡಕ್ಕೆ ಇಳಿದರುವ ಇವರು ಈಗಾಗಲೇ ಪಕ್ಷದಲ್ಲಿದ್ದುಕೊಂಡು ಶಾಸಕರು ಸಂಸದರ ಮೂಲಕ ದಂಪತಿಗಳು ಸಾಕಷ್ಟು ಜನರ ಸೇವೆಯನ್ನು ಮಾಡಿ ಅಭಿವೃದ್ದಿ ಕೆಲಸ ಕಾರ್ಯ ಗಳನ್ನು ಮಾಡಿರುವ ಇವರ ಸ್ಪರ್ಧೆಯಿಂದ ವಾರ್ಡ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸ್ಪಂದನೆ ಸಿಗುತ್ತಿದೆ.

ಹೊಸ ಕನಸು ಹೊಸ ಉತ್ಸಾಹದೊಂದಿಗೆ ಕಣಕ್ಕಿ ಳಿದಿರುವ ಇವರಿಗೆ ಉತ್ತಮ ಸ್ಪಂದನೆ ಸಿಗುತ್ತಿದ್ದು ಪ್ರಚಾರಕ್ಕೆ ಹೋದಲ್ಲೆಲ್ಲ ಒಳ್ಳೇಯ ಭರವಸೆಯ ಮಾತುಗಳು ಉತ್ಸಾಹದ ಗೆಲುವಿನ ಆಸೆಯ ಮಾತುಗಳನ್ನು ವಾರ್ಡ್ ನ ಜನರು ಹೇಳುತ್ತಿದ್ದಾರೆ.

ಪ್ರಚಾರಕ್ಕೆ ಹೋದಲೆಲ್ಲ ನಮಗೂ ನಿಮ್ಮಂಥವರೇ ಬೇಕಾಗಿದೆ ಬದಲಾವಣೆ ಬೇಕಾಗಿದೆ ನಮಗೆ ನೀವು ಬಂದಿದ್ದು ತುಂಬಾ ತುಂಬಾ ಅನುಕೂಲ ಯಾವುದೇ ಕಾರಣಕ್ಕೂ ನಿಮ್ಮೊಂದಿಗೆ ನಾವಿದ್ದೇವೆ ನೀವು ಬಂದರೆ ನಮಗೂ ಅನುಕೂಲ ನಿಮ್ಮಂಥ ಸರಳ ಸಜ್ಜನಿಕೆಯ ನಾಯಕರೇ ನಮ್ಮ ವಾರ್ಡ್ ಗೆ ಬೇಕು ಎನ್ನುತ್ತಿದ್ದಾರೆ.

ಇದೇ ಉತ್ಸಾಹದಲ್ಲಿ ನಿಂಗವ್ವ ಹಾರಿಕೊಪ್ಪ ಅವರು ಪ್ರಚಾರವನ್ನು ಮಾಡುತ್ತಿದ್ದಾರೆ.ಇಂದು ಕೂಡಾ ವಾರ್ಡ್ ನ ಹಾಸ್ಮಿ ನಗರ,ಗುಡಿ ಓಣಿ, ಕೊಪ್ಪದಕೇರಿ, ಸೋ‌ನಾಪೂರ ಸೇರಿದಂತೆ ಹಲವೆಡೆ ಅಬ್ಬರದ ಪ್ರಚಾರವನ್ನು ಮಾಡಿದರು.

ಪಾದಯಾತ್ರೆಯ ಮೂಲಕ ತೆರಳಿ ಪ್ರಚಾರ ಮಾಡುತ್ತಾ ಮತಯಾಚನೆ ಮಾಡಿದರು. ನಿಂಗವ್ವ ಹಾರಿಕೊಪ್ಪ ಅವರ ಪರವಾಗಿ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ,ಕೂಡಾ ಮತ ಯಾಚನೆ ಮಾಡಿ ಪ್ರಚಾರ ಮಾಡಿದರು ಮಂಜುನಾಥ ಚೌಹಾನ್, ವೆಂಕಟೇಶ್ ಮನ್ನಿಕೇರಿ, ಯಮನಪ್ಪ ಗುರಿಕಾರ, ಬಸವರಾಜ ಸೇರಿದಂತೆ ಹಲವರು ಸಾಥ್ ನೀಡಿ ಮತಯಾಚನೆ ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.