ಧಾರವಾಡ –
ಧಾರವಾಡ ದ ವಾರ್ಡ್ 2 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಾಕ್ ಆಗಿದೆ. ಕೈ ಪಕ್ಷದ ಪ್ರಮುಖ ನಾಯಕಿ ಯರು ಬಿಜೆಪಿ ಸೇರ್ಪಡೆಯಾಗಿದ್ದಾರೆ.ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಶಾಸಕ ಅಮೃತ ದೇಸಾಯಿ ಸಮ್ಮುಖದಲ್ಲಿ ಕೈ ಪಕ್ಷಕ್ಕೆ ಕೈ ಕೊಟ್ಟು ಬಿಜೆಪಿ ಪಕ್ಷಕ್ಕೆ ಸೇರಿದರು.
ಪಕ್ಷದ ಚುನಾವಣೆಯ ಕಚೇರಿ ಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಹೇಮಾವತಿ ಶಾಲಿನಿ,ಹಾಗೂ ಅನಸುಯಾ ಬುಡರಕಟ್ಟಿ ಕಾಂಗ್ರೆಸ್ ಪಕ್ಷದ ಭಾರ ಇಳಸಿ ಬಿಜೆಪಿ ಪಕ್ಷದ ಭಾರ ವನ್ನು ಹೊತ್ತುಕೊಂಡರು
ಮಂಜುನಾಥ ಚೌಹಾನ್, ವಿಠ್ಠಲ ಧರ್ಮಶಾಲೆ, ವೆಂಕಟೇಶ ಮನ್ನಿಕೇರಿ,ಬಸವರಾಜ ಮಡಿವಾಳರ, ವಿರೇಶ ಹಿರೇಮಠ,ಸತೀಶ್ ಕಿಡದಾಳ,ಮತ್ತು ಶಂಕರ ಹಾರಿಕೊಪ್ಪ,ರಘು ಧರ್ಮಶಾಲೆ ಇವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಇವರು ಸೇರ್ಪಡೆಯಾದರು
ಪಕ್ಷದ ಧ್ವಜವನ್ನು ನೀಡಿ ಸನ್ಮಾನಿಸಿ ಗೌರವಿಸಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು ಚುನಾವಣೆಯ ಸಮಯದಲ್ಲಿ ಇವರ ಸೇರ್ಪಡೆ ಯಿಂದಾಗಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ
ಇನ್ನೂ ಇತ್ತ ವಾರ್ಡ್ ನ ಹಲವೆಡೆ ಪ್ರಚಾರ ವನ್ನು ಮಾಡಲಾಗಿದೆ. ಮನೆ ಮನೆಗೆ ತೆರಳಿ ಮತಯಾಚನೆ ಯನ್ನು ಮಾಡಲಾಯಿತು.ಅಲ್ಲದೇ ಕಚೇರಿಯಲ್ಲಿ ಬಿಡುವಿಲ್ಲದೆ ಕೆಲಸ ಕಾರ್ಯದಲ್ಲಿ ತೊಡಗಿದ್ದು ಕಂಡು ಬಂದಿತು
ಶ್ರೀಮತಿ ನಿಂಗವ್ವ ಶಂಕರ ಹಾರಿಕೊಪ್ಪ ಅವರು ಮಹಿಳಾ ಮಣಿಗಳೊಂದಿಗೆ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು ಕಂಡು ಬಂದಿತು.ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ದರು
ಮತಯಾಚನೆ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ಕಂಡು ಬರುತ್ತಿದೆ ಅಲ್ಲದೇ ಭರವಸೆ ಯನ್ನು ನೀಡುತ್ತಿದ್ದು ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಉತ್ಸಾಹ ದಲ್ಲಿ ಬಿಜೆಪಿ ಅಭ್ಯರ್ಥಿ ಇದ್ದಾರೆ