ವಾರ್ಡ್ 35 ರಲ್ಲಿ ಬಸವರಾಜ ಮಾಯಾಕಾರ ಗೆ ಜೈಕಾರ ಎನ್ನುತ್ತಿದ್ದಾರೆ ಮತದಾರರು – ವಾರ್ಡ್ ನಲ್ಲಿ ಪ್ರಚಾರದ ಹವಾ ಹೇಗಿದೆ ಗೊತ್ತಾ…..

Suddi Sante Desk

ಹುಬ್ಬಳ್ಳಿ –

ಹೊಸ ಕನಸು ಹೊಸ ಬದಲಾವಣೆ ಬಯಸಿ ಧಾರವಾಡದ ವಾರ್ಡ್ 35 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಸ್ಪರ್ಧೆ ಮಾಡಿರುವ ಬಸವರಾಜ ಮಾಯಕಾರ ಪರ ಸಾಕಷ್ಟು ಪ್ರಮಾಣದಲ್ಲಿ ಗೆಲುವಿಗೆ ಅಲೆ ಕಂಡು ಬರುತ್ತಿದೆ.

ಹೌದು ಕ್ಷೇತ್ರದಲ್ಲಿ ಈವರೆಗೆ ಪಕ್ಷದಿಂದ ಮಾಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮುಂದಿಟ್ಟು ಕೊಂಡು ಮತದಾರರ ಮುಂದೆ ಇಟ್ಟು ಹಾಗೇ ಹೊಸ ಹೊಸ ಕನಸು ಯೋಜನೆ ಗಳನ್ನು ಹೇಳುತ್ತಾ ಮತಯಾಚನೆ ಮಾಡುತ್ತಿದ್ದಾರೆ.

ವಾರ್ಡ್ ನ ಹಲವೆಡೆ ಇಂದು ಕೂಡಾ ಬಿಡುವಿಲ್ಲದೆ ಪ್ರಚಾರವನ್ನು ಮಾಡಿದರು.ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು ಇನ್ನೂ ಪ್ರಮುಖವಾಗಿ ಕಳೆದ ಮೂರು ನಾಲ್ಕು ದಿನಗಳಿಂದಲೂ ವಾರ್ಡ್ ನಲ್ಲಿ ಪ್ರಚಾರಕ್ಕೆ ಹೋದ ಸಮಯದಲ್ಲಿ ಸಾರ್ವಜನಿ ಕರಿಂದ ಸಾಕಷ್ಟು ಪ್ರಮಾಣದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ.

ಇದರೊಂದಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಪ್ರಚಾರ ಜೋರಾಗಿದ್ದು ಭರ್ಜರಿ ಕ್ಯಾಂಪೇನ್ ಮಾಡುತ್ತಿದ್ದಾರೆ ಬಸವರಾಜ ಮಾಯಕಾರ ಅವರು.ಬೆಳ್ಳಂ ಬೆಳಿಗ್ಗೆ ಪಕ್ಷದ ಕಾರ್ಯ ಕರ್ತರು ಮುಖಂಡರು ಹಾಗೇ ಮಹಿಳಾ ಮುಖಂಡ ರೊಂದಿಗೆ ಮನೆ ಮನೆಗೆ ತೆರಳಿ ಭರ್ಜರಿಯಾಗಿ ಮತಯಾಚನೆ ಮಾಡಿದರು.

ವಾರ್ಡ್ ನ ಹಲವು ಬಡಾವಣೆಗಳಲ್ಲಿ ಬಿಡುವಿಲ್ಲದೇ ಮನೆ ಮನೆಗೆ ತೆರಳಿ ಕ್ಯಾಂಪೇನ್ ಮಾಡಿದರು. ಹಲವು ಬಡಾವಣೆಗಳಲ್ಲಿನ ಮನೆ ಮನೆಗೆ ತೆರಳಿ ಪ್ರಚಾರವನ್ನು ಮಾಡಿದರು ಈಗಾಗಲೇ ಕಾಂಗ್ರೆಸ್ ಪಕ್ಷದ ಶಾಸಕರು ಈ ಹಿಂದೆ ವಾರ್ಡ್‌ ನಲ್ಲಿ ಮಾಡಿದ ಕೆಲಸ ಕಾರ್ಯಗಳನ್ನು ಹೇಳುತ್ತಿದ್ದಾರೆ.ಜೊತೆಗೆ ಇದರೊಂದಿಗೆ ಮತಯಾಚನೆ ಮಾಡುತ್ತಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.