ಹುಬ್ಬಳ್ಳಿ –
ಹೊಸ ಕನಸು ಹೊಸ ಬದಲಾವಣೆ ಬಯಸಿ ಇದೇ ಮೊದಲ ಬಾರಿಗೆ ಹುಬ್ಬಳ್ಳಿಯ ವಾರ್ಡ್ 42 ರಲ್ಲಿ ಬಿಜೆಪಿ ಪಕ್ಷದಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಮಹಾದೇವಪ್ಪ ನರಗುಂದ ಸ್ಪರ್ಧೆ ಮಾಡಿದ್ದಾರೆ.
ಇವರ ಪರ ಸಾಕಷ್ಟು ಪ್ರಮಾಣದಲ್ಲಿ ಗೆಲುವಿಗೆ ಅಲೆ ವಾರ್ಡ್ ನಲ್ಲಿ ಕಂಡು ಬರುತ್ತಿದೆ.ಹೌದು ಕ್ಷೇತ್ರದಲ್ಲಿ ಈವರೆಗೆ ಪಕ್ಷದಿಂದ ಮಾಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಇಟ್ಟು ಹಾಗೇ ಹೊಸ ಹೊಸ ಕನಸು ಯೋಜನೆ ಗಳನ್ನು ಹೇಳುತ್ತಾ ಮತಯಾಚನೆ ಮಾಡುತ್ತಿದ್ದಾರೆ.
ವಾರ್ಡ್ ನ ಹಲವೆಡೆ ಇಂದು ಕೂಡಾ ಬಿಡುವಿಲ್ಲದೆ ಪ್ರಚಾರವನ್ನು ಮಾಡಿದರು.ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು ಇನ್ನೂ ಪ್ರಮುಖವಾಗಿ ಕಳೆದ ಮೂರು ನಾಲ್ಕು ದಿನಗಳಿಂದಲೂ ವಾರ್ಡ್ ನಲ್ಲಿ ಪ್ರಚಾರಕ್ಕೆ ಹೋದ ಸಮಯದಲ್ಲಿ ಸಾರ್ವಜನಿ ಕರಿಂದ ಸಾಕಷ್ಟು ಪ್ರಮಾಣದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ.
ಇದರೊಂದಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಪ್ರಚಾರ ಜೋರಾಗಿದ್ದು ಭರ್ಜರಿ ಕ್ಯಾಂಪೇನ್ ಮಾಡುತ್ತಿದ್ದಾರೆ ಮಹಾದೇ ವಪ್ಪ ನರಗುಂದ ಅವರು.ಬೆಳ್ಳಂ ಬೆಳಿಗ್ಗೆ ಪಕ್ಷದ ಕಾರ್ಯಕರ್ತರು ಮುಖಂಡರು ಹಾಗೇ ಮಹಿಳಾ ಮುಖಂಡ ರೊಂದಿಗೆ ಮನೆ ಮನೆಗೆ ತೆರಳಿ ಭರ್ಜರಿ ಯಾಗಿ ಮತಯಾಚನೆ ಮಾಡಿದರು.
ವಾರ್ಡ್ ನ ಹಲವು ಬಡಾವಣೆಗಳಲ್ಲಿ ಬಿಡುವಿಲ್ಲದೇ ಮನೆ ಮನೆಗೆ ತೆರಳಿ ಕ್ಯಾಂಪೇನ್ ಮಾಡಿದರು. ಹಲವು ಬಡಾವಣೆಗಳಲ್ಲಿನ ಮನೆ ಮನೆಗೆ ತೆರಳಿ ಪ್ರಚಾರವನ್ನು ಮಾಡಿದರು ಈಗಾಗಲೇ ಅದೇ ಪಕ್ಷದ ಶಾಸಕರು ವಾರ್ಡ್ ನಲ್ಲಿ ಮಾಡಿದ ಕೆಲಸ ಕಾರ್ಯ ಗಳನ್ನು ಹೇಳುತ್ತಿದ್ದಾರೆ.ಜೊತೆಗೆ ಇದರೊಂದಿಗೆ ಮತಯಾಚನೆ ಮಾಡುತ್ತಿದ್ದಾರೆ
ಇದರೊಂದಿಗೆ ನಬಿ ಮಜೀದಗೆ ಭೇಟಿ ನೀಡಿ ನಮಾಜಿಗೆ ಬಂದ ಅಲ್ಪಸಂಖ್ಯಾತರ ಮತದಾರರಲ್ಲಿ ಹಾಗೂ ಗುರುಹಿರಿಯರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಯಾಗಿ ಮಹಾದೇವಪ್ಪ ನರಗುಂದ ಇವರ ಪರ ಬಿರುಸಿನ ಪ್ರಚಾರ ಮಾಡಿ ಕರಪತ್ರ ಹಂಚಿ ಮತದಾರರಿಗೆ ಮನವೊಲಿಸುವಂತೆ ಅವರಲ್ಲಿ ವಿನಂತಿಸಿ ಈ ಬಾರಿ ಬಿಜೆಪಿ ಪಕ್ಷಕ್ಕೆ ನಿಮ್ಮ ಅಮೂಲ್ಯವಾದ ಮತ ನೀಡಬೇಕೆಂದು ಕಳಕಳಿಯಿಂದ ಕೊಳ್ಳಲಾಯಿತು..