ಧಾರವಾಡ –
ಕೊನೆಯ ದಿನದ ವರೆಗೂ ನಿಮಗೆ ಟಿಕೇಟ್ ನಿಮ್ಮದೇ ಬಿ ಫಾರಂ ನಲ್ಲಿ ಹೆಸರಿದೆ ಎನ್ನುತ್ತಾ ಪಟ್ಟಿಯಲ್ಲೂ ಕೂಡಾ ಹೆಸರನ್ನು ಪ್ರಕಟ ಮಾಡಿ ಇನ್ನೇನು ಬೆಳಗಾಗುತ್ತಲೆ ಎಲ್ಲವೂ ಉಲ್ಟಾ ಪಲ್ಟಾ ಅದರೂ ಕೂಡಾ ಛಲ ಬಿಡದೇ ಕಣದಿಂದ ಹಿಂದೆ ಸರಿಯದೇ ಜನ ಸೇವೆಯೆ ಜನಾರ್ಧನ ಸೇವೆ ಎನ್ನುತ್ತಾ ಮತ್ತೆ ಧಾರವಾಡದ ವಾರ್ಡ್ 8 ರಲ್ಲಿ ಪ್ರಕಾಶ ಘಾಟಗೆ ಕಣಕ್ಕೀಳಿದಿದ್ದಾರೆ.
ಕಾಂಗ್ರೇಸ್ ಪಕ್ಷದಿಂದ ಮತ್ತೆ ಟಿಕೇಟ್ ಸಿಗುತ್ತದೆ ಎಂದುಕೊಂಡಿದ್ದ ಪ್ರಕಾಶ್ ಘಾಟಗೆ ಹಿರಿಯ ನಾಯಕರಿಗೆ ಗಂಧ ಗಾಳಿ ಗೊತ್ತಿಲ್ಲದವರು ಎಲ್ಲೊ ಕುಳಿತುಕೊಂಡು ಯಾವುದನ್ನು ನೋಡದೆ ತಿಳಿದು ಕೊಳ್ಳದೇ ಟಿಕೇಟ್ ನೀಡಿದ್ದು ದುರಂತದ ವಿಚಾರ
ಒಂದು ಕಡೆಯಾದರೆ ಇನ್ನೂ ಇದ್ಯಾವುದನ್ನು ತಲೆ ಕೇಡಿಸಿಕೊಳ್ಳದ ಪ್ರಕಾಶ ಘಾಟಗೆ ಯವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ವಾರ್ಡ್ ನ ಮತದಾರರು ಕಣಕ್ಕೀಳಿಸಿದರು.
ಅಷ್ಟೇ ಅಲ್ಲದೇ ಸಧ್ಯ ಗೆಲುವಿಗೆ ಪ್ರಚಾರವನ್ನು ಮಾಡುತ್ತಿದ್ದಾರೆ. ಹೌದು ಇದು ಧಾರವಾಡದ ವಾರ್ಡ್ 8 ಚಿತ್ರಣವಾಗಿದ್ದು ಈ ಹಿಂದೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಯನ್ನು ಮಾಡಿದ್ದ ಇವರಿಗೆ ಟಿಕೇಟ್ ತಪ್ಪಿದರು ಕೂಡಾ ವಾರ್ಡ್ ನ ಜನರೇ ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು
2003 ರಲ್ಲಿ ಕಾಂಗ್ರೇಸ್ ಪಕ್ಷದಿಂದ ಮೊದಲ ಬಾರಿಗೆ ಪಾಲಿಕೆಯ ಸದಸ್ಯರಾಗಿ ನಂತರ ಅಲ್ಪ ಮತಗಳಿಂದ ಸೋತಿದ್ದ ಇವರು ಈಗ ಮತ್ತೆ ಸ್ಪರ್ಧೆ ಬಯಸಿದ್ದರು ಟಿಕೇಟ್ ಕೈತಪ್ಪಿದ ಹಿನ್ನಲೆಯಲ್ಲಿ ಸಧ್ಯ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದು ವಾರ್ಡ್ ನಲ್ಲಿ ಅಬ್ಬರದಿಂದ ಪ್ರಚಾರವನ್ನು ಮಾಡುತ್ತಿದ್ದಾರೆ.
ವಾರ್ಡ್ ನ ತುಂಬೆಲ್ಲಾ ತಮ್ಮ ಆಪ್ತರನ್ನು ಬೆಂಬಲಿ ಗರನ್ನು ಹಾಗೇ ಘಾಟಗೆ ಪರಿವಾರದವರೊಂದಿಗೆ ಪ್ರಚಾರ ಮಾಡುತ್ತಿದ್ದು ಸಾಕಷ್ಟು ಪ್ರಮಾಣದಲ್ಲಿ ಜನ ಬೆಂಬಲ ಕಂಡು ಬರುತ್ತಿದೆ.
ಕಳೆದ ಹಲವಾರು ವರ್ಷಗಳಿಂದ ಕಾಂಗ್ರೇಸ್ ಪಕ್ಷ ದಲ್ಲಿ ನಿಷ್ಟಾವಂತರಾಗಿ ದುಡಿದ ಪ್ರಕಾಶ ಘಾಟಗೆ ಅವರಿಗೆ ಮತ್ತೆ ಈ ಬಾರಿಯೂ ಟಿಕೇಟ್ ತಪ್ಪಿಸಿದ ಕೈ ಪಕ್ಷಕ್ಕೆ ಪಾಠ ಕಲಿಸಲು ಜನರೇ ಮುಂದಾಗಿ ತಮ್ಮ ನಾಯಕನೊಂದಿಗೆ ಪ್ರಚಾರವನ್ನು ಮಾಡುತ್ತಿದ್ದಾರೆ.
ಹೋದಲೆಲ್ಲ ಬೆಂಬಲ ನೀಡಿ ತಾವೇ ಪ್ರಚಾರವನ್ನು ಮಾಡುತ್ತಿರುವ ಚಿತ್ರಣ ಕಂಡು ಬರುತ್ತಿದ್ದು ಜನ ಬೆಂಬಲವನ್ನು ನೋಡತಾ ಇದ್ದರೆ ನೂರಕ್ಕೆ ನೂರರಷ್ಟು ಈ ಬಾರಿ ಇವರ ಗೆಲುವು ನಿಶ್ಚಿತ ಎಂಬ ಮಾತುಗಳು ಕಂಡು ಬರುತ್ತಿದೆ.