ಧಾರವಾಡ-
ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹತ್ತಿ ಖರೀದಿ ಕೇಂದ್ರವನ್ನು ಧಾರವಾಡದಲ್ಲೂ ಆರಂಭ ಮಾಡಲಾಗಿದೆ. ಧಾರವಾಡದ ಬೇಲೂರಿನ ಕೈಗಾರಿಕಾ ಪ್ರದೇಶದಲ್ಲಿ ಈ ಒಂದು ಖರೀದಿ ಕೇಂದ್ರವನ್ನು ಆರಂಭ ಮಾಡಲಾಗಿದೆ.ರಾಜ್ಯ ಸರ್ಕಾರದಿಂದ ಈ ಒಂದು ಖರೀದಿ ಕೇಂದ್ರವನ್ನು ಆರಂಭ ಮಾಡಲಾಗಿದ್ದು ಕೈಗಾರಿಕಾ ಪ್ರದೇಶ ರಾಮದೇವ ಅಗ್ರೋ ಇಂಡಸ್ಟ್ರೀಸ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಪಿಎಮ್ ಸಿ ಅಧ್ಯಕ್ಷ ಬಸಪ್ಪ ಹೊಸೂರ ಚಾಲನೆ ನೀಡಿದರು.
ಇಂದಿನಿಂದ ಬೆಂಬಲ ಬೆಲೆಯಲ್ಲಿ ಹತ್ತಿಯನ್ನು ರೈತರಿಂದ ಖರೀದಿ ಮಾಡಲಾಗುತ್ತಿದ್ದು ಈ ಒಂದು ಕಾರ್ಯಕ್ರಮದಲ್ಲಿ ಅಧ್ಯಕ್ಷರೊಂದಿಗೆ ಉಪಾಧ್ಯಕ್ಷರಾದ ಕೃಷ್ಣಾ ಕೋಳಾನಟ್ಟಿ ಎಪಿಎಮ್ ಸಿ ಸದಸ್ಯರಾದ ಮಡಿವಾಳಪ್ಪ ಇರಸನ್ನವರ ಕಾರ್ಯದರ್ಶಿ ವಿ ಜಿ ಹಿರೇಮಠ ಸೇರಿದಂತೆ ರಾಮದೇವ ಅಗ್ರೋ ಕೇಂದ್ರದ ಮುಖ್ಯಸ್ಥರು ಸಿಬ್ಬಂದ್ದಿಗಳು ಉಪಸ್ಥಿತರಿದ್ದರು.