ಧಾರವಾಡ –
ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿ ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ನೂತನ ಕಟ್ಟಡ ವನ್ನು ಉದ್ಘಾಟನೆ ಮಾಡಲಾಯಿತು.ಆರ್. ಐ.ಡಿ. ಎಫ್. ಯೋಜನೆ ಅಡಿಯಲ್ಲಿ ನಿರ್ಮಿಸಿದ ಶಾಲಾ ಕೊಠಡಿಗಳ ಉದ್ಘಾಟನೆಯನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರು ಅಮೃತ. ಅಯ್ಯಪ್ಪ ದೇಸಾಯಿ ಉದ್ಘಾಟನೆ ಮಾಡಿದರು.
ಮಾಜಿ ಶಾಸಕಿ ಸೀಮಾ ಅಶೋಕ ಮಸೂತಿ ಸೇರಿದಂತೆ, ಗ್ರಾಮ ಪಂಚಾಯತಿ ಅದ್ಯಕ್ಷರಾದ ತೇಜಸ್ವಿನಿ ತಲವಾಯಿ, ಉಪಾದ್ಯಕ್ಷರಾದ ವಿಠ್ಠಲ ಇಂಗಳೆ, ಶಿಕ್ಷಣ ಸಮಿತಿಯ ನಿಂಗಪ್ಪ ಮೊರಬದ ವಿಠ್ಠಲ ಭೋವಿ,ಸುರೇಶ ಬನ್ನಿಗಿಡದ ರೇಣುಕಾ ಅಸುಂಡಿ,ಸೇರಿದಂತೆ ಎಲ್ಲಾ ಗ್ರಾಮ ಪಂಚಾ ಯತಿ ಸದಸ್ಯರು ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರಾದ ಸುರೇಶ ಅಂಬಿಗೇರ ಸರ್ವ ಸದಸ್ಯರು ಹಾಗೂ ಸಿ ಆರ್ ಪಿ ಮುಲ್ಲಾನವರ ಮುಖ್ಯ ಶಿಕ್ಷಕ ರಮೇಶ ಕಾಂಬಳೆ ಸೇರಿದಂತೆ ಹಲವರು ಹಾಜರಿದ್ದರು.