ಚನ್ನಮ್ಮನ ಕಿತ್ತೂರು – ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಪೊಲೀಸ್ ವಸತಿ ಗೃಹಗಳನ್ನು ಬೆಳಗಾವಿಯ ಚನ್ನಮ್ಮ ಕಿತ್ತೂರಿನಲ್ಲಿ ಉದ್ಘಾಟಿಸಲಾಯಿತು. ಗೃಹ ಸಚಿವ ಬಸವರಾಜ ಬೊಮ್ಮೊಯಿ ನೂತನವಾಗಿ ನಿರ್ಮಾಣಗೊಂಡ 24 ವಸತಿ ಸಮುಚ್ಚಯಗಳನ್ನು ಉದ್ಘಾಟಿಸಿದ್ರು.
ಇದೇ ವೇಳೆ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಮಾತನಾಡಿ ‘ಈಗಿರುವ 300 ಪೊಲೀಸ್ ವಸತಿ ಗೃಹಗಳ ಸಂಖ್ಯೆಯನ್ನು 2025ರ ವೇಳೆಗೆ 350ಕ್ಕೆ ಹೆಚ್ಚಿಸಲಾಗುವುದು ಎಂದರು.
‘ಹೆಚ್ಚುವರಿಯಾಗಿ ನೀಡಲಾಗಿರುವ 50 ವಸತಿ ಗೃಹಗಳಲ್ಲಿ ಕಿತ್ತೂರಿಗೆ ಮತ್ತೆ 12 ಮನೆಗಳನ್ನು ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.‘ಹೊಸ ಪೊಲೀಸ್ ಠಾಣೆ ಸ್ಥಾಪನೆ ಮಾಡಬೇಕು ಎಂದು ಬೇಡಿಕೆ ಬಂದಿದೆ. ಸರ್ಕಾರ ಮಂಜೂರಾತಿ ನೀಡುವ ಸಂದರ್ಭದಲ್ಲಿ ಎಂ.ಕೆ. ಹುಬ್ಬಳ್ಳಿಯ ಉಪಠಾಣೆಯನ್ನು ಪೂರ್ಣ ಪ್ರಮಾಣದ ಠಾಣೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಇದಕ್ಕೆ 2 ಕೋಟಿ ನೀಡುವುದಾಗಿ ಶಾಸಕ ದೊಡ್ಡಗೌಡರ ಬೇಡಿಕೆಗೆ ಗೃಹ ಸಚಿವರು ಹೇಳಿದರು.
ಇನ್ನೂ ಇದೇ ವೇಳೆ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ‘ಕಿತ್ತೂರು ಪೊಲೀಸ್ ಠಾಣೆ ಕಟ್ಟಡ ತೀರಾ ಹಳೆಯದಾಗಿದೆ. ಹೊಸ ಕಟ್ಟಡ ನಿರ್ಮಿಸುವ ಅಗತ್ಯವಿದೆ. ಜೊತೆಗೆ ಸಂಚಾರ ಪೊಲೀಸ್ ಠಾಣೆಯನ್ನೂ ನೀಡಬೇಕೆಂದು ಒತ್ತಾಯವನ್ನು ಮಾಡಿದರು.ಇನ್ನೂ ಇದೇ ವೇಳೆ ಬೆಳಗಾವಿ ವಿಭಾಗದ ಕೆಲವು ಜಿಲ್ಲೆಗಳಲ್ಲಿ ನೆರೆ ಬಂದ ಸಂದರ್ಭದಲ್ಲಿ ಪೊಲೀಸರ ಅನುಭವ ಸಂಗ್ರಹಿಸಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಅವರು ರಚಿಸಿರುವ ‘ಬಿಯಾಂಡ್ ರೆಡ್ ಅಲರ್ಟ್’ ಪುಸ್ತಕವನ್ನು ಗೃಹ ಸಚಿವರು ಬಿಡುಗಡೆ ಮಾಡಿದರು.
ಈ ಒಂದು ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ವಿಶ್ವನಾಥ ಪಾಟೀಲ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹನುಮಂತ ಲಂಗೋಟಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಚನ್ನಮ್ಮ ಹೊಸಮನಿ, ಉಪಾಧ್ಯಕ್ಷ ಹೇಮಾವತಿ ಬೇಕವಾಡಕರ, ಎಎಸ್ ಪಿ. ಪ್ರದೀಪ ಗುಂಟಿ, ಸಿಪಿಐ ಮಂಜುನಾಥ ಕುಸುಗಲ್, ಎಸ್.ಐ. ದೇವರಾಜ ಉಳ್ಳಾಗಡ್ಡಿ, ವಿರಕ್ತಯ್ಯಾ ಸಾಲಿಮಠ, ಡಾ. ಬಸವರಾಜ ಪರವಣ್ಣವರ,
ಬಸನಗೌಡ ಸಿದ್ರಾಮನಿ, ಉಳವಪ್ಪ ಉಳ್ಳೇಗಡ್ಡಿ ಪೊಲೀಸ್ ಸಿಬ್ಬಂದಿಗಳಾದ ಭಾಸ್ಕರ ಪತ್ತಾರ ಲಗಮಪ್ಪ ಜಗಲವಾದಿ ಸೇರಿದಂತೆ ಕಿತ್ತೂರ ಪೊಲೀಸ್ ಠಾಣೆಯ ಹಲವು ಸಿಬ್ಬಂದಿಗಳು ಉಪಸ್ಥಿತರಿದ್ದರು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡ್ರ ನಿರೂಪಿಸಿದರು. ಪೊಲೀಸ್ ಅಧೀಕ್ಷಕ ಅಮರನಾಥ ರೆಡ್ಡಿ ವಂದಿಸಿದರು.